ಹನ್ನೊಂದು ಆಸ್ಕರ್ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದ ಜೇಮ್ಸ್ ಕೆಮರಾನ್ ನಿರ್ಮಿಸಿ ನಿರ್ದೇಶಿಸಿದ್ದ 1997ರ ಸೂಪರ್ ಹಿಟ್ ಚಿತ್ರ 'ಟೈಟಾನಿಕ್' ಮುಂದಿನ ವರ್ಷದಿಂದ ವಿಶ್ವದಾದ್ಯಂತ ಥ್ರೀಡಿ ರೂಪದಲ್ಲಿ ಚಿತ್ರಮಂದಿರಗಳಿಗೆ ಅಪ್ಪಳಿಸಲಿದೆ.
ಬೃಹತ್ ಟೈಟಾನಿಕ್ ಹಡಗು ಏಪ್ರಿಲ್ 10, 1912ರಂದು ಮುಳುಗಡೆಯಾಗಿ ಅಪಾರ ಜೀವಹಾನಿ ಸಂಭವಿಸಿತ್ತು. ಈ ಘಟನೆಯಲ್ಲಿ ಪ್ರಾಣಕಳೆದುಕೊಂಡವರ ಶತವರ್ಷಾಚರಣೆಯ ದಿನ ಏಪ್ರಿಲ್ 6, 2012ರಂದು, ಮಡಿದವರ ನೆನಪಿಗಾಗಿ 'ಟೈಟಾನಿಕ್'ನ ಥ್ರೀಡಿ ವರ್ಷನ್ ವಿಶ್ವಕ್ಕೆ ಅಪ್ಪಳಿಸಲಿದೆ.
ಈ ಹಿಂದೆ ತೋರಿಸಿದಕ್ಕಿಂತ ವಿವರಣಾತ್ಮಕವಾಗಿ, ಅತ್ಯಾಧುನಿಕ ಥ್ರೀಡಿ ತಂತ್ರಜ್ಞಾನಗಳನ್ನು ಬಳಸಿ 'ಟೈಟಾನಿಕ್' ಚಿತ್ರಕ್ಕೆ ಹೊಸ ಮೆರುಗು ಕೊಡಲಾಗಿದೆ. ಹಾಗೂ ಹಾರ್ಟ್ ಟಚ್ಚಿಂಗ್ ಸೀನ್‌ಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ತೋರಿಸಲಾಗಿದೆ ಎಂದಿದ್ದಾರೆ ಜೇಮ್ಸ್ ಕೆಮರಾನ್.
'ಟೈಟಾನಿಕ್' ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದ ಲಿಯಾನಾರ್ಡೋ ಡಿಕಾಪ್ರಿಯೋ ಮತ್ತು ಕೇಟ್ ವಿನ್‌ಸ್ಲೆಟ್ ಅವರ ನಡುವಿನ ಸ್ನೇಹ ಸಂಬಂಧ ಇಂದಿಗೂ ಗಾಢವಾಗಿರಲು 'ಟೈಟಾನಿಕ್' ಚಿತ್ರದಲ್ಲಿ ನಿರ್ವಹಿಸಿದ ಪಾತ್ರಗಳೇ ಮೂಲಾಧಾರ ಎಂದೂ ನಾಯಕಿ ಕೇಟ್ ಇತ್ತೀಚೆಗೆ ಹೇಳಿಕೊಂಡಿದ್ದರು. ತನ್ನ ಸಾಂಸಾರಿಕ ಜೀವನದಲ್ಲಿ ಕಲಹವುಂಟಾಗಿ ವಿಚ್ಚೇದನ ಪಡೆದಿದ್ದ ನಟಿ, ಯಾರು ಏನೇ ಅಂದರೂ ಆತ್ಮೀಯ ಸ್ನೇಹಿತ ಲಿಯಾನಾರ್ಡೋನಷ್ಟು ನನ್ನನ್ನು ಅರ್ಥಮಾಡಿಕೊಂಡವರು ಈ ವಿಶ್ವದಲ್ಲಿ ಯಾರೂ ಇಲ್ಲ ಎಂದಿದ್ದರು.