ಮೈಕಲ್ ಜಾಕ್ಸನ್ ಆಸ್ತಿಗಾಗಿ ಕೋರ್ಟ್ ಮೆಟ್ಟಿಲೇರಿದ ರೋಗಿ!

PR
ದಿವಂಗತ ಪಾಪ್ ದಂತಕತೆ ಮೈಕೆಲ್ ಜಾಕ್ಸನ್‌ಗೂ ನನಗೂ ಎಪ್ಪತರ ದಶಕದಲ್ಲಿ ಲೈಂಗಿಕ ಸಂಬಂಧವಿತ್ತು. ಆತನೊಂದಿಗಿನ ಸಹ-ವಾಸದಿಂದ ಆತನಿಗಿದ್ದ ಕೆಲವು ಚರ್ಮರೋಗಗಳು ನನಗೆ ಬಳುವಳಿಯಾಗಿ ಬಂದಿದೆ. ಈ ಖಾಯಿಲೆಗಳು ಈಗ ತೀವ್ರ ಸ್ವರೂಪ ಪಡೆದಿದ್ದು, ಇದರಿಂದ ನನ್ನ ದೈನಂದಿನ ಜೀವನ ಸಾಗಿಸಲೂ ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ತನ್ನ ಅಳಲನ್ನು ತೋಡಿಕೊಂಡಿದ್ದಾರೆ ಮಾಜಿ ಪ್ರಿಯತಮೆ ಎಂದುಕೊಂಡಿರುವ ಶೆಲ್ಲಿ ಸ್ಮಿತ್.

ಪ್ರಸ್ತುತ ಸ್ಥಿತಿಯಲ್ಲಿ ನಾನು ತೀರಿಸಲಾಗದ ಸಾಲದಲ್ಲಿ ಮುಳುಗಿದ್ದು, ಇಬ್ಬರು ಸಾಲಗಾರರು ಮೈಕಲ್ ಜಾಕ್ಸನ್‌ನ ಎಸ್ಟೇಟ್‌ನ್ನು ಹತ್ತು ದಶಲಕ್ಷ ಡಾಲರ್‌ಗೆ ಕೊಟ್ಟು ಸಾಲ ವಜಾಮಾಡಲು ಪ್ರಸ್ತಾಪಿಸುತ್ತಿದ್ದಾರೆ. ಆದರೆ ಮೈಕೆಲ್‌ನೊಂದಿಗೆ ಅನೋನ್ಯ ಸಂಬಂಧ ಹೊಂದಿದ್ದರೂ ಆತನ ಆಸ್ತಿಯ ಕಿಂಚಿಂತೂ ಪಾಲು ನನಗೆ ದಕ್ಕದಿರುವುದು ದುರಂತವಾಗಿದೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಮಧ್ಯ ಪ್ರವೇಶಿಸಿ ನನಗೆ ಸೇರಬೇಕಾದ ಆಸ್ತಿಯ ಪಾಲನ್ನು ಒದಗಿಸಿಕೊಡಬೇಕಾಗಿ ಮೈಕೆಲ್ ಜಾಕ್ಸನ್‌ನ ಮಾಜಿ ಪ್ರೇಯಸಿ ಎನ್ನಲಾಗುತ್ತಿರುವ ಶೆಲ್ಲಿ ಸ್ಮಿತ್ ಅವರು ಕ್ಯಾಲಿಫೋರ್ನಿಯಾದ ಸುಪೀರಿಯರ್ ಕೋರ್ಟ್‌ನಲ್ಲಿ ಮೇ 19ರಂದು ಮನವಿ ಸಲ್ಲಿಸಿದ್ದಾರೆ.

1979ರಲ್ಲಿ ಮೈಕೆಲ್ ಜಾಕ್ಸನ್‌ನೊಂದಿಗೆ ಲೈಂಗಿಕ ಸಂಬಂಧ ಆರಂಭಿಸಿರುವುದಾಗಿ ಕೋರ್ಟ್‌ಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಉಲ್ಲೇಖಿಸಿರುವ ಶೆಲ್ಲಿ ಸ್ಮಿತ್, ಅದಾದ ಕೆಲವೇ ದಿನಗಳಲ್ಲಿ ನನ್ನ ಕಾಲು, ಮುಖ ಮತ್ತು ತುಟಿಯ ಭಾಗಗಳಲ್ಲಿ ಗುಳ್ಳೆಗಳು ಏಳಲಾರಂಭಿಸಿದವು ಎಂದಿದ್ದಾರೆ.

ಇದೇ ಅರ್ಜಿಯ ತನ್ನ ಎರಡನೇ ಆಪಾದನೆಯಲ್ಲಿ ತಾನು ಮೈಕೆಲ್‌ ಜಾಕ್ಸನ್‌ನೊಂದಿಗೆ 1977ರಲ್ಲಿ ಮೊದಲ ಬಾರಿಗೆ ದೇಹ ಹಂಚಿಕೊಂಡಿದ್ದಾಗಿ ಉಲ್ಲೇಖಿಸಿದ್ದಾರೆ. ಅಲ್ಲದೆ, ಚರ್ಮ ಸೋಂಕು ಆತನಿಂದಲೇ ಹರಡಿರುವುದು ಎಂದು ಸ್ವತಃ ಮೈಕೆಲ್ ಗಮನಕ್ಕೆ ಬಂದಿದ್ದರೂ ತನ್ನೊಂದಿಗಿನ ಲೈಂಗಿಕ ಸಂಬಂಧವನ್ನು ಮುಂದುವರಿಸಿದ್ದ ಎಂದು ಆರೋಪಿಸಿರುವ ಶೆಲ್ಲಿ ಸ್ಮಿತ್, ತಾನು ಕೇವಲ ಆತನೊಂದಿಗೆ ಮಾತ್ರ ದೇಹ ಸಂಪರ್ಕ ಹೊಂದಿದ್ದುದಾಗಿ ತಿಳಿಸಿದ್ದಾರೆ.

ಈ ಹಿಂದೆಯೂ ಕೋರ್ಟ್‌ ಮೆಟ್ಟಿಲೇರಿದ್ದಳು ಶೆಲ್ಲಿ! (ಮುಂದಿನ ಪುಟದಲ್ಲಿ)

PR
2009ರಲ್ಲೇ ಕೊನೆಯುಸಿರೆಳೆದಿದ್ದ ಪಾಪ್ ತಾರೆ ಮೈಕೆಲ್ ಜಾಕ್ಸನ್‌ ಅವರ ಆಸ್ತಿಯ ಹಕ್ಕಿಗಾಗಿ 2010ರಲ್ಲೇ ಶೆಲ್ಲಿ ಸ್ಮಿತ್ ಕೋರ್ಟ್ ಮೊರೆ ಹೋಗಿದ್ದರು. ಅಂದು ಸಲ್ಲಿಸಿದ್ದ ಅರ್ಜಿಯಲ್ಲಿ, ತಾನು ಮತ್ತು ಮೈಕೆಲ್ ಎಪ್ಪತ್ತರ ದಶಕದಲ್ಲಿ ನ್ಯೂಯಾರ್ಕ್‌ನ ಪ್ರಸಿದ್ಧ ಹೊಟೇಲ್‌ನ ಕೋಣೆಯೊಂದರಲ್ಲಿ ಗುಪ್ತವಾಗಿ ವಿವಾಹವಾಗಿದ್ದು, ಅದಕ್ಕೆ ಸಾಕ್ಷಿ ಆ ಹೊಟೇಲ್‌ನ ಸಿಬ್ಬಂದಿಗಳು ಎಂದು ತಾನು ಸಲ್ಲಿಸಿದ್ದ ಅಹವಾಲಿನಲ್ಲಿ ವಿಷಯ ಮಂಡಿಸಿದ್ದರು. ಆದರೆ ಇದನ್ನು ಶೀಘ್ರವೇ ಪರಿಶೀಲಿಸಿದ ನ್ಯಾಯಾಲಯ ಅರ್ಜಿಯನ್ನು ವಜಾಮಾಡಿತ್ತು.

ಒಮ್ಮೆ 1979, ನಂತರ 1977ರಲ್ಲಿ ಮೊದಲ ದೇಹ ಸಂಬಂಧ ಹೊಂದಿರುವುದಾಗಿ ಗೊಂದಲಮಯ ಹೇಳಿಕೆ ಸಲ್ಲಿಸಿರುವ ಶೆಲ್ಲಿ ಸ್ಮಿತ್ ಈ ಬಾರಿಯೂ ತನ್ನ ಕಾರ್ಯಸಾಧನೆಯ ಆರಂಭದಲ್ಲೇ ಎಡವಟ್ಟು ಮಾಡಿಕೊಂಡಿದ್ದಾರೆ.

ಮೈಕೆಲ್ ಶಂಕಾಸ್ಪದವಾಗಿ ಸತ್ತಾಗ ಈಕೆ ಹಾಜರಾಗಿಲ್ಲ!(ಮುಂದಿನ ಪುಟದಲ್ಲಿ)

PR
ಮೈಕೆಲ್ ಜಾಕ್ಸನ್ ಸಾವಿಗೆ ವೈದ್ಯರೇ ಕಾರಣ ಎಂಬ ಆರೋಪ ಎದ್ದಿದ್ದಾಗ ಶೆಲ್ಲಿ ಸ್ಮಿತ್ ಕಾಣಿಸಿಕೊಂಡಿರಲಿಲ್ಲ. ಆತನ ಖಾಸಗಿ ವೈದ್ಯ ಕಾನ್ರಾಡ್ ಮುರ್‍ರೆ 'ಪ್ರೊಪೊಫೋಲ್' ಎಂಬ ಔಷಧಿಯನ್ನು ಅಗತ್ಯಕಿಂತ ಹೆಚ್ಚಾಗಿ ನೀಡಿದ್ದರಿಂದ ಆತ ಸಾವನ್ನಪ್ಪಿದ್ದಾನೆ. ಇದು ಮಾನವ ಹತ್ಯೆ ಎಂದು ಆರೋಪಿಸಿ ಕೋರ್ಟ್ ಮೆಟ್ಟಿಲೇರಿದ್ದ ಪ್ರಕರಣದಲ್ಲಿ ಸಾಕ್ಷಿ ನುಡಿಯಲು ಮುಂದೆ ಇದ್ದವರು ಜಾಕ್ಸನ್‌ನ ಪತಿಯರಾದ ಡೆಬ್ಬಿ ರೋವ್, ಲೀಸಾ ಮೇರಿ ಪ್ರೆಸ್ಲಿ ಮತ್ತು ಸ್ವತಃ ಜಾಕ್ಸನ್‌ನಿಂದಲೇ ಪತ್ನಿ ಎಂದು ಕರೆಸಿಕೊಂಡಿದ್ದರೆನ್ನಲಾದ ಆಪ್ತಕಾರ್ಯದರ್ಶಿ ನ್ಯಾನಿ ಗ್ರೇಸ್ರ್‍ವಾರಂಬ!

ವೆಬ್ದುನಿಯಾವನ್ನು ಓದಿ