ಪಾಪ್ ಗಾಯಕಿ ಡಿವಾ ಮಡೊನ್ನಾ ಅವರ ಬಹುನಿರೀಕ್ಷೆಯ ಚಿತ್ರ 'ಡಬ್ಲ್ಯು.ಇ' ವೆನಿಸ್ ಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಾಣಲಿದೆ.
ಬ್ರಿಟನ್ ರಾಜ ನಾಲ್ಕನೇ ಎಡ್ವರ್ಡ್ ಮತ್ತು ಅಮೆರಿಕಾದ ವಾಲ್ಲೀಸ್ ಸಿಂಪ್ಸನ್ ಅವರ ನಡುವಿನ ಸಂಬಂಧದ ಕುರಿತು ಇದ್ದ ಕಟ್ಟುಕಥೆಯನ್ನು ಸೇರಿಸಿ ಚಿತ್ರ ಹೆಣೆಯಲಾಗಿದೆ.
ಇತ್ತೀಚೆಗೆ ಚಿತ್ರರಂಗದಲ್ಲೇ ತನ್ನನ್ನು ತೊಡಗಿಸಿಕೊಂಡಿರುವ ಡಿವಾ ಮಡೊನ್ನಾ ಸಂಸಾರ ನಿರ್ವಹಣೆಯ ಒತ್ತಡದಿಂದ ಪಾಪ್ ಗೀತೆಗೆ ಅಲ್ಪಾವಧಿಯ ಬಿಡುವು ನೀಡಿರುವುದಾಗಿ ಹೇಳಿಕೊಂಡಿದ್ದಾರೆ.
52 ವರ್ಷದ ಗಾಯಕಿ ಡಿವಾ ಮಡೊನ್ನಾಳ 'ಡಬ್ಲ್ಯು.ಇ' ಚಿತ್ರವನ್ನು ತಾನೇ ನಿರ್ದೇಶಿಸಿದ್ದು, ಚಿತ್ರದಲ್ಲಿ ಅಬಿ ಕಾರ್ನಿಷ್, ಅಂಡ್ರಿಯಾ ರೈಸ್ ಬೊರೊ, ಲಾರೆನ್ಸ್ ಪೋಕ್ಸ್ ಜತೆಗೆ ಡಿವಾ ಅವರ ಹದಿನಾಲ್ಕರ ಬಾಲೆ ಲೌರ್ಡಸ್ ಕೂಡ ನಟಿಸಿದ್ದಾರೆ.