ಜಾಹೀರಾತುಗಳಲ್ಲಿ ಮಹಿಳೆಯರು ಕಾಣಿಸಿಕೊಳ್ಳುವಂತಿಲ್ಲ! ಯಾಕೆ?

ಶನಿವಾರ, 6 ಆಗಸ್ಟ್ 2022 (08:47 IST)
ಟೆಹ್ರಾನ್ : ಮಹಿಳೆಯರ ಹಿಜಬ್ ವಿಚಾರಕ್ಕೆ ಇಸ್ಲಾಮಿಕ್ ದೇಶಗಳಲ್ಲಿ ಆಗಾಗ ವಿವಾದಗಳು ಆಗುತ್ತಲೇ ಇರುತ್ತವೆ.

ಇದೀಗ ಇರಾನ್ನಲ್ಲೂ ಹಿಜಬ್ ವಿಚಾರಕ್ಕೆ ಜಾಹೀರಾತುಗಳಲ್ಲಿ ಮಹಿಳೆಯರನ್ನೇ ಬ್ಯಾನ್ ಮಾಡಿರುವುದಾಗಿ ವರದಿಯಾಗಿದೆ.

ಪ್ರಸಿದ್ಧ ಐಸ್ಕ್ರೀಂ ಕಂಪನಿಯ ಜಾಹೀರಾತೊಂದರಲ್ಲಿ ಮಹಿಳೆಯೊಬ್ಬಳು ಸಡಿಲವಾದ ಹಿಜಬ್ ಧರಿಸಿದ್ದು ಕಂಡುಬಂದ ಬಳಿಕ ಇರಾನ್ನಾದ್ಯಂತ ಭಾರೀ ವಿವಾದ ಉಂಟಾಯಿತು. ಬಳಿಕ ಇರಾನ್ನ ಸಂಸ್ಕೃತಿ ಮತ್ತು ಇಸ್ಲಾಮಿಕ್ ಮಾರ್ಗದರ್ಶನ ಸಚಿವಾಲಯ ಎಲ್ಲಾ ರೀತಿಯ ಜಾಹೀರಾತುಗಳಲ್ಲಿ ಮಹಿಳೆಯರನ್ನು ಪ್ರದರ್ಶಿಸುವುದನ್ನೇ ನಿಷೇಧಿಸುವಂತೆ ಮಾಡಿದೆ. 

ಈ ಜಾಹೀರಾತು ಇರಾನ್ ಧರ್ಮಗುರುಗಳನ್ನು ಕೆರಳಿಸಿದೆ ಎಂದು ವರದಿಯಾಗಿದೆ. ಅವರು ವಿವಾದಾತ್ಮಕ ಜಾಹೀರಾತನ್ನು ಪ್ರದರ್ಶಿಸಿದ ಸ್ಥಳೀಯ ಐಸ್ ಕ್ರೀಮ್ ತಯಾರಕ ಕಂಪನಿ ವಿರುದ್ಧ ಮೊಕದ್ದಮೆ ಹೂಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ ಎನ್ನಲಾಗಿದೆ. 

ಮಹಿಳೆಯರಿಗೆ ಇನ್ನು ಮುಂದೆ ಜಾಹೀರಾತುಗಳಲ್ಲಿ ಕಾಣಿಸಿಕೊಳ್ಳಲು ಅವಕಾಶವಿಲ್ಲ ಎಂದು ಹೇಳಿದೆ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ