ವಿಶ್ವದ ಎಲ್ಲಾ ದೇಶಗಳನ್ನು ಸುತ್ತಿ ಬಂದ ದಾಖಲೆಯನ್ನು ಹೊಂದಿರುವ ಇಂಗ್ಲೆಂಡ್ ಮೂಲದ 24 ವರ್ಷ ವಯಸ್ಸಿನ ಜೇಮ್ಸ್ ಅಸ್ಕ್ವಿತ್ ಅವರ ದಾಖಲೆಯನ್ನು ಲೆಕ್ಸಿ ಅಲ್ಫೋರ್ಡ್ ಉಡಿಸ್‌ಗೊಳಿಸಿದ್ದಾರೆ. ಗಿನ್ನಿಸ್ ವೆಬ್‌ಸೈಟ್ ದಾಖಲೆಯ ಪ್ರಕಾರ ಜೇಮ್ಸ್ ವಿಶ್ವವನ್ನು ಸುತ್ತಿ ಬಂದಾಗ ಆತನಿಗೆ 24 ವರ್ಷ ಮತ್ತು 192 ದಿನಗಳಾಗಿದ್ದವು.ಆದರೆ, ಲೆಕ್ಸಿ ತಮ್ಮ 21ನೇ ವಯಸ್ಸಿನಲ್ಲಿಯೇ ಹೊಸ ದಾಖಲೆ ಬರೆದಿದ್ದಾರೆ.
ಆದಾಗ್ಯೂ, ಅಲ್ಫೋರ್ಡ್ ಪ್ರಕಾರ, ಅವರು ಯಾವುದೇ ದಾಖಲೆಗಳನ್ನು ಮುರಿಯಬೇಕು ಎನ್ನುವ ಬಯಕೆಯಿರಲಿಲ್ಲ. ಪ್ರಯಾಣಿಸುವುದು ಹವ್ಯಾಸವಾಗಿತ್ತು. ಆದರೆ, 2016ರಲ್ಲಿ ವಿಶ್ವವನ್ನೇ ಸುತ್ತಿಬರಬೇಕು ಎನ್ನುವ ಬಗ್ಗೆ ಗಂಭೀರವಾದ ನಿರ್ಧಾರ ತೆಗೆದುಕೊಂಡರು. ಅದರಂತೆ ವಿಶ್ವದ ಎಲ್ಲಾ ದೇಶಗಳಿಗೆ ಭೇಟಿ ನೀಡಿ ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ.