ಚೀನಾ ದೋಣಿ, ವಿದೇಶಿ ಹಡಗಿಗೆ ಡಿಕ್ಕಿ: 7 ಮಂದಿ ಸಮುದ್ರಪಾಲು

ಶನಿವಾರ, 7 ಮೇ 2016 (17:42 IST)
ಚೀನಾದ ಮೀನುಗಾರಿಕೆ ದೋಣಿ ವಿದೇಶಿ ಸರಕುಸಾಗಣೆ ನೌಕೆಗೆ ಡಿಕ್ಕಿ ಹೊಡೆದು ಮುಳುಗಿದ್ದರಿಂದ 7 ಮಂದಿ ನೀರುಪಾಲಾದ ಘಟನೆ ಪೂರ್ವ ಚೀನಾ ಸಮುದ್ರದಲ್ಲಿ ಸಂಭವಿಸಿದೆ.  ಮೀನುಗಾರಿಕೆ ದೋಣಿ ಲು ರಾಂಗ್‌‍  ಯುನಲ್ಲಿ  19 ಜನರಿದ್ದರು. ಅಲ್ಲಿ ಹಾದುಹೋಗುತ್ತಿದ್ದ ಮೀನುಗಾರಿಕೆ ದೋಣಿಗಳು ಇಬ್ಬರನ್ನು ರಕ್ಷಿಸಿದ್ದು, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ. 
 
ವಿದೇಶಿ ಸರಕುಸಾಗಣೆ ನೌಕೆ ಯಾವ ದೇಶಕ್ಕೆ ಸೇರಿದ್ದು ಎಂಬ ಬಗ್ಗೆ ಸ್ಪಷ್ಟನೆ ನೀಡಲಾಗಿಲ್ಲ. ಪೂರ್ವ ಚೀನಾ ಸಮುದ್ರದಲ್ಲಿ ಅನೇಕ ಜನರ ವಾಸ್ತವ್ಯವಿಲ್ಲದ ಸಣ್ಣ ದ್ವೀಪಗಳ ಗುಂಪಿದ್ದು, ಚೀನಾ ಮತ್ತು ಜಪಾನ್ ಅವು ತಮಗೆ ಸೇರಿದ್ದೆಂದು ಪ್ರತಿಪಾದಿಸುತ್ತಿವೆ.

ಚೀನಾದ ಮೀನುಗಾರಿಕೆ ದೋಣಿ ಮತ್ತು ಜಪಾನಿನ ಗಸ್ತು ನೌಕೆಗಳ ನಡುವೆ ಮುಂಚಿನ ಘಟನೆಗಳು ರಾಜತಾಂತ್ರಿಕ ವಿವಾದವನ್ನು ಹುಟ್ಟುಹಾಕಿತ್ತು. 

ವೆಬ್ದುನಿಯಾವನ್ನು ಓದಿ