ಸ್ವಿಮ್ಮಿಂಗ್ಗೆ ತೆರಳಿದ್ದ ಬಾಲಕಿ ಶಾರ್ಕ್ ದಾಳಿಗೆ ಬಲಿ!

ಸೋಮವಾರ, 6 ಫೆಬ್ರವರಿ 2023 (12:55 IST)
ಕ್ಯಾನ್ಬೆರಾ : ಇಲ್ಲಿನ ಪಶ್ಚಿಮ ಆಸ್ಟ್ರೇಲಿಯಾದ ರಾಜಧಾನಿ ಪರ್ತ್ ನದಿಯಲ್ಲಿ ಸ್ವಿಮ್ಮಿಂಗ್ ಮಾಡಲು ತೆರಳಿದ್ದ 16 ವರ್ಷದ ಬಾಲಕಿ ಶಾರ್ಕ್ (ಮೀನು) ದಾಳಿಯಿಂದ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಪರ್ತ್ನ ಫ್ರೀಮೆಂಟಲ್ ಬಂದರು ಪ್ರದೇಶದಲ್ಲಿ ಸ್ವಾನ್ ನದಿಯ ಸಂಚಾರ ಸೇತುವೆಯ ಬಳಿ ಘಟನೆ ನಡೆದಿದೆ. ತೀವ್ರವಾಗಿ ಗಾಯಗೊಂಡಿದ್ದ ಬಾಲಕಿಯನ್ನು ನೀರಿನಿಂದ ಹೊರ ತೆಗೆಯಲಾಯಿತು. ಅಷ್ಟರಲ್ಲಿ ಬಾಲಕಿ ಸಾವನ್ನಪ್ಪಿದ್ದಳು.

16ರ ಬಾಲಕಿ ನದಿಯಲ್ಲಿ ಜೆಟ್ ಸ್ಕೀ (ಜಲವಾಹನ) ಮೂಲಕ ಡಾಲ್ಫಿನ್ನೊಂದಿಗೆ ಈಜಲು ತೆರಳಿದ್ದಳು. ಈ ವೇಳೆ ಶಾರ್ಕ್ ದಾಳಿಗೆ ತುತ್ತಾಗಿದ್ದಾಳೆ. ಆದ್ರೆ ಶಾರ್ಕ್ ಯಾವ ರೀತಿ ದಾಳಿ ಮಾಡಿದೆ ಎಂಬುದು ಖಚಿತವಾಗಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ