ಕಣಕ್ಕಿಂತ ಚಿಕ್ಕದಾದ ಹ್ಯಾಂಡ್ಬಾಗ್ ಬರೋಬ್ಬರಿ 51 ಲಕ್ಷ ರೂ.ಗೆ ಸೇಲ್

ಶುಕ್ರವಾರ, 30 ಜೂನ್ 2023 (13:44 IST)
ವಾಷಿಂಗ್ಟನ್ : ಆನ್ಲೈನ್ ಹರಾಜಿನಲ್ಲಿ ಉಪ್ಪಿನ ಕಣಕ್ಕಿಂತ ಆಕಾರದಲ್ಲಿ ಚಿಕ್ಕದಾಗಿರುವ ಹ್ಯಾಂಡ್ಬ್ಯಾಗ್ವೊಂದನ್ನು 63,000 ಡಾಲರ್ಗೆ (ಅಂದಾಜು 51.6 ಲಕ್ಷ ರೂ.) ಮಾರಾಟ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.
 
ಈ ಹ್ಯಾಂಡ್ಬ್ಯಾಗ್ ಗಾತ್ರದಲ್ಲಿ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದ್ದು, ಹಳದಿ ಮತ್ತು ಹಸಿರು ಬಣ್ಣವನ್ನು ಹೊಂದಿದೆ. ಇದೊಂದು ಮೈಕ್ರೋಸ್ಕೋಪಿಕ್ ಬ್ಯಾಗ್ ಆಗಿದ್ದು, ಜನಪ್ರಿಯ ಲೂಯಿ ವಿಟಾನ್ ವಿನ್ಯಾಸವನ್ನು ಆಧರಿಸಿದೆ.

ಈ ಹ್ಯಾಂಡ್ಬ್ಯಾಗ್ ಅನ್ನು ನ್ಯೂಯಾರ್ಕ್ ಆರ್ಟ್ ಕಲೆಕ್ಟಿವ್ ಎಮ್ಎಸ್ಸಿಹೆಚ್ಎಫ್ ರಚಿಸಿದ್ದು, ಕೇವಲ 0.003 ಇಂಚುಗಳಿಂತ ಕಡಿಮೆ ಅಗಲವನ್ನು ಹೊಂದಿದೆ. ಈ ತಿಂಗಳ ಆರಂಭದಲ್ಲಿ ಎಮ್ಎಸ್ಸಿಹೆಚ್ಎಫ್ ಈ ಫೋಟೋವನ್ನು ತನ್ನ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಆನ್ಲೈನ್ನಲ್ಲಿ ಭಾರೀ ಸಂಚಲನ ಮೂಡಿಸಿತ್ತು. 

ಹ್ಯಾಂಡ್ಬ್ಯಾಗ್ ಸೂಜಿಯ ಕಣ್ಣಿನ ಮೂಲಕ ಹಾದುಹೋಗುವಷ್ಟು ಕಿರಿದಾಗಿದೆ ಮತ್ತು ಸಮುದ್ರದಲ್ಲಿ ಸಿಗುವ ಉಪ್ಪಿನ ಕಣಕ್ಕಿಂತ ಚಿಕ್ಕದಾಗಿದೆ ಎಂಬ ಶೀರ್ಷಿಕೆಯ ಜೊತೆಗೆ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಬ್ಯಾಗ್ ಅನ್ನು 2 ಫೋಟೋಪಾಲಿಮರ್ ಬಳಸಿ ತಯಾರಿಸಲಾಗಿದೆ. ಫೋಟೋಪಾಲಿಮರ್ ಅನ್ನು 3ಡಿ ಪ್ರಿಂಟ್ ಮೈಕ್ರೋ-ಸ್ಕೇಲ್ ಪ್ಲಾಸ್ಟಿಕ್ ಭಾಗಗಳಿಗೆ ಬಳಸಲಾಗುತ್ತದೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ