ಕೊರೋನಾ ಬಳಿಕ ಜನರ ಹಂಟ್ ಮಾಡಲು ಬರ್ತಿದೆ ‘ಹ್ಯಾಂಟಾ’ ವೈರಸ್!
ಬುಧವಾರ, 25 ಮಾರ್ಚ್ 2020 (09:22 IST)
ನವದೆಹಲಿ: ಈಗಾಗಲೇ ಚೀನಾ ಕೊರೋನಾವೈರಸ್ ಎಂಬ ಮಹಾಮಾರಿಯನ್ನು ಹರಡಿಸಿ ಇಡೀ ವಿಶ್ವವೇ ಜೀವ ಭಯದಲ್ಲಿ ಕೂರುವಂತೆ ಮಾಡಿದೆ. ಇದೀಗ ಚೀನಾದಿಂದ ಮತ್ತೊಂದು ಸಾಂಕ್ರಾಮಿಕ ರೋಗದ ಭೀತಿ ಎದುರಾಗಿದೆ.
ಹ್ಯಾಂಟಾ ವೈರಸ್ ಎಂಬ ಮತ್ತೊಂದು ಮಾರಕ ರೋಗದ ಸೋಂಕು ಚೀನಾದಲ್ಲಿ ಇದುವರೆಗೆ 30 ಜನರಿಗೆ ತಗುಲಿದ್ದು, ಈ ಪೈಕಿ ಒಬ್ಬರು ಸಾವನ್ನಪ್ಪಿರುವ ವರದಿಯಾಗಿದೆ. ತಲೆ ನೋವು, ಮಾಂಸ ಖಂಡಗಳ ನೋವು, ವಾಂತಿ, ಜ್ವರ ಈ ರೋಗದ ಲಕ್ಷಣಗಳು.
ಇಲಿ ಮುಂತಾದ ಪ್ರಾಣಿಗಳ ಮೂತ್ರ, ಜೊಲ್ಲಿನಿಂದ ಹರಡುವ ರೋಗ ಇದಾಗಿದ್ದು, ಮತ್ತೆ ಮಾರಕವಾಗಿ ಪರಿಣಮಿಸುವ ಸಾಧ‍್ಯತೆಯಿದೆ. ಹೀಗಾಗಿ ಮತ್ತೆ ಜಾಗೃತರಾಗಿರಬೇಕು.