ಗೂಢಚರ್ಯ ಆರೋಪದಲ್ಲಿ ಗುರುವಾರ ಬಂಧಿತನಾಗಿರುವ ಪಾಕಿಸ್ತಾನದ ಹೈಕಮಿಷನ್ ಸಿಬ್ಬಂದಿ ಮೆಹಮೂದ್ ಅಕ್ತರ್ ಈ ವಿಷಯವನ್ನು ಪೊಲೀಸರ ಎದುರು ಬಾಯ್ಬಿಟ್ಟಿದ್ದಾನೆ. ಮುಂಬೈ ಮಾದರಿಯ ಉಗ್ರ ಕೃತ್ಯ ನಡೆಸುವುದಕ್ಕಾಗಿ ಪಾಕಿಸ್ತಾನದ ಐ.ಎಸ್.ಐ ಸಮುದ್ರ ಮಾರ್ಗವಾಗಿ ಉಗ್ರರನ್ನು ಕಳುಹಿಸಲು ಯೋಜನೆ ರೂಪಿಸಿತ್ತು. ಇದಕ್ಕೆ ಸಂಬಂಧಿಸಿ ಪಶ್ಚಿಮ ಕರಾವಳಿಯಲ್ಲಿ ಭಾರತೀಯ ರಕ್ಷಣಾ ಪಡೆಗಳು ನಿಯೋಜಿತವಾಗಿರುವ ಮಾಹಿತಿಯನ್ನು ಸಂಗ್ರಹಿಸಿ, ದಾಳಿ ನಡೆಸಲು ಸಂಚು ರೂಪಿಸಿದ್ದರು ಎನ್ನಲಾಗುತ್ತಿದೆ.
ಬಂಧಿತ ಗೂಢಚಾರಿ ಪಶ್ಚಿಮ ಕರಾವಳಿ, ಸರ್ ಕಿಕ್, ಕಚ್, ಗುಜರಾತ್, ಮಹಾರಾಷ್ಟ್ರ, ಗೋವಾದಲ್ಲಿನ ಮಿಲಿಟರಿ ಪಡೆಗಳ ಹಾಗೂ ಅದರ ಕಾರ್ಯ ನಿಯೋಜನೆಗಳ ಮಾಹಿತಿ ಕಲೆ ಹಾಕಿದ್ದನು. ಐ.ಎಸ್.ಐ ಉಗ್ರರ ನಿರ್ದೇಶನದ ಮೇರೆಗೆ ಈತ ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ. ಅದರಲ್ಲೂ ಮಖ್ಯವಾಗಿ ಪಶ್ಚಿಮ ಕರಾವಳಿ ಕುರಿತು ಮಾಹಿತಿ ಸಂಗ್ರಹಿಸಿದ್ದ ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಹೇಳಿದ್ದಾರೆ.
ಪಾಕಿಸ್ತಾನದ ಗೂಢಚಾರ ಸಂಸ್ಥೆ ಐ.ಎಸ್.ಐ ಗಾಗಿ ಪ್ರತ್ಯೇಕವಾಗಿ ಗೂಢಚರ್ಯ ಜಾಲವೊಂದನ್ನು ಸೃಷ್ಟಿಸಿಕೊಂಡಿತ್ತು ಎಂದು ತಿಳಿದು ಬಂದಿದೆ. ಭಾರತ-ಪಾಕ್ ಗಡಿಯಲ್ಲಿನ ಸಾಖಷ್ಟು ಭದ್ರೆತ ಮಾಹಿತಿಗಳು ಹಾಗೂ ಬಿ.ಎಸ್.ಎಫ್. ಯೋಧರ ಚಲನ ವಲನಗಳ ಬಹುತೇಕ ಮಾಹಿತಿಗಳು ಮತ್ತು ದಾಖಲೆಗಳು ಬಂಧಿತ ಗೂಢಚಾರ ಅಕ್ತರ್ ಬಳಿಯಿದ್ದವು ಎನ್ನಲಾಗಿದೆ. ಅಲ್ಲದೆ, ತೀರಾ ಗೌಪ್ಯ ಮಾಹಿತಿಗಳನ್ನು ಆತನಿಂದ ಪಡೆಯಲಾಗಿದ ಎನ್ನಲಾಗುತ್ತಿದೆ.