ಅವರ ದೇಹದ ತೂಕ ೫೦೦ ಕೆಜಿಗೆ ತಲುಪಿದ್ದು, ಇದಕ್ಕಿಂತ ಹೆಚ್ಚು ತೂಕದ ಇನ್ನೊಂದು ಮಹಿಳೆ ಇಲ್ಲ ಎನ್ನಲಾಗಿದೆ. ಉತ್ತರ ಈಜಿಪ್ಟ್ ನ ಅಲೆಕ್ಸಾಂಡ್ರಿಯಾದಲ್ಲಿ ನೆಲೆಸಿರುವ ಇವರು, ಸ್ಥೂಲಕಾಯದ ಸಮಸ್ಯೆಯಿಂದಾಗಿ ೨೫ ವರ್ಷಗಳಿಂದ ಮನೆಯಿಂದ ಹೊರಗೆ ಬಂದಿಲ್ಲ. ಸ್ಥೂಲ ದೇಹ ಇಳಿಸಲು ಮಾಡಿದ ಪ್ರಯತ್ನಗಳೆಲ್ಲ ವಿಫಲವಾದಾಗ, ಆಕೆಯ ಸಹೋದರಿ ಸಾರ್ವಜನಿಕರಲ್ಲಿ ಸಹಾಯ ಹಸ್ತ ಚಾಚಿದ್ದರು. ಸದ್ಯ ತಾಯಿ ಹಾಗೂ ಸಹೋದರಿ ಆರೈಕೆಯಲ್ಲಿ ಇಮಾನ್ ಇದ್ದಾರೆ.
ಹುಟ್ಟಿದಾಗಲೇ ಇಮಾನ್ ಅವರು ಐದು ಕೆಜಿ ಇದ್ದಿದ್ದು, ಹನ್ನೊಂದನೇ ವಯಸ್ಸಿನಲ್ಲಿ ಪಾಶ್ವ್ ವಾಯು ಪೀಡಿತರಾದರು. ಈಗ ಅವರಿಗೆ ಆನೆಕಾಲು ರೋಗವಿದೆ ಎಂದು ವೈದ್ಯರು ತಿಳಿಸಿದ್ದು, ಕೈ ಕಾಲುಗಳಲ್ಲಿ ಭಾರಿ ಊತ ಕಾಣಿಸಿಕೊಳ್ಳುತ್ತಿದೆ.