ಒಂದೇ ಮಗುವಿಗೆ ಎರಡು ಬಾರಿ ಜನ್ಮ ! ಏನಿದು ವಿಚಿತ್ರ...!!!

ಬುಧವಾರ, 26 ಅಕ್ಟೋಬರ್ 2016 (14:30 IST)

ಹ್ಯೂಸ್ಟನ್: ಹುಟ್ಟು ಮತ್ತು ಸಾವು ಕೇವಲ ಒಂದೊಂದೇ ಬಾರಿ. ಒಂದು ಬಾರಿ ಸತ್ತ ಮೇಲೆ ಮತ್ತೆ ಸಾಯಲು ಸಾಧ್ಯವಿಲ್ಲ. ಅದೇ ರೀತಿ, ಒಂದು ಬಾರಿ ಹುಟ್ಟಿದ ಮೇಲೆ ಮತ್ತೊಮ್ಮೆ ಹುಟ್ಟಲು ಸಾಧ್ಯವಿಲ್ಲ. ಆದರೆ ಅಮೆರಿಕಾ ವೈದ್ಯರು ಒಮ್ಮೆ ಹುಟ್ಟಿದ ನಂತರ ಮತ್ತೊಮ್ಮೆ ಹುಟ್ಟಬಹುದು ಎನ್ನುವುದನ್ನು ಸಾಬೀತು ಪಡಿಸಿದ್ದಾರೆ.
 


 

ಹೌದು.. ಆಶ್ಚರ್ಯ ಆಗ್ತಾ ಇದ್ಯಾ, ಒರ್ವ ಗರ್ಭಿಣಿ ಎರಡೆರಡು ಬಾರಿ ಓಂದೇ ಮಗುವಿಗೆ ಹೇಗೆ ಜನ್ಮ ನೀಡಲು ಸಾಧ್ಯ ಎಂದು? ಸರಿ ಹಾಗಾದರೆ, ಈ ವರದಿ ಓದಿ. ನಿಮಗೇ ತಿಳಿಯುತ್ತೆ.

 

ಅಮೆರಿಕಾದ ಹ್ಯೂಸ್ಟನ್ ನಲ್ಲಿ ಒಂದು ಮಗು ಎರಡು ಬಾರಿ ಜನಿಸಿದೆ. ಆ ತಾಯಿ ಎರಡು ಬಾರಿ ಮಗುವನ್ನು ಹೆರುವ ಮೂಲಕ ಹೊಸದೊಂದು ದಾಖಲೆ ಮಾಡಿದ್ದಾಳೆ. ಮಾರ್ಗರೇಟ್ ಬೊಮರ್ ಹೆಸರಿನ ಮಹಿಳೆ ಗರ್ಭವತಿಯಾಗಿದ್ದಳು. ಗರ್ಭ ಧರಿಸಿ ಹದಿನಾರು ವಾರದ ನಂತರ, ಹೊಟ್ಟೆಯಲ್ಲಿದ್ದ ಮಗವಿನ ಬೆನ್ನು ಮೂಳೆ ತುದಿಯಲ್ಲಿ ಟ್ಯೂಮರ್ ಕಾಣಿಸಿಕೊಂಡಿತ್ತು. ಆ ಭ್ರೂಣ 23 ವಾರಕ್ಕೆ ಬಂದಾಗ ಪ್ರಾಣಾಪಯಕ್ಕೆ ಸಿಲುಕುತ್ತಿರುವುದು ಕಂಡು ಬಂದಿದೆ. ಮಗುವನ್ನು ಬದುಕಿಸಬೇಕೆಂದು ಪಣತೊಟ್ಟ ವೈದ್ಯರು, ಅಪರೂಪದ ಶಸ್ತ್ರಚಿಕಿತ್ಸೆಗೆ ಮುಂದಾದರು.

 

ಮೊದಲು ಗರ್ಭಿಣಿ ಹೊಟ್ಟೆಯಲ್ಲಿರುವ ಮಗುವನ್ನು ಹೊರತೆಗೆದು, ಹದಿನೈದು ನಿಮಿಷಗಳಲ್ಲಿ ಶಸ್ತ್ರಚಿಕಿತ್ಸೆ ಮುಗಿಸಿದ್ದಾರೆ. ನಂತರ ಆ ಮಗುವನ್ನು ಮತ್ತೆ ಗರ್ಭದಲ್ಲಿಟ್ಟು ಬಾಹ್ಯ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದಾದ ಮೂರು ತಿಂಗಳ ನಂತರ ಗರ್ಭಿಣಿ ಮಾರ್ಗರೆಟ್ ಬೊಮರ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ವೈದ್ಯ ಲೋಕದಲ್ಲಿ ಇದೊಂದು ಅದ್ಭುತ ಹಾಗೂ ಅಚ್ಚರಿ ಕಾರ್ಯವಾಗಿದ್ದು ಪ್ರಪಂಚವೇ ಹುಬ್ಬೇರಿಸುತ್ತಿದೆ. ಇಂತಹ ಅಪರೂಪದ ಘಟನೆಗೆ ಕಾರಣವಾದ ಮಗುವಿಗೆ  ಲಿನ್ಲಿಹೋಪ್ ಎಂದು ಹೆಸರಿಡಲಾಗಿದೆ. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ