ಬ್ಯಾಂಕ್ ದಿವಾಳಿ : ಮಾಧ್ಯಮಗಳ ಪ್ರಶ್ನೆ ನಿರ್ಲಕ್ಷಿಸಿ ಹೊರನಡೆದ ಬೈಡನ್

ಬುಧವಾರ, 15 ಮಾರ್ಚ್ 2023 (09:37 IST)
ವಾಷಿಂಗ್ಟನ್ : ಅಮೆರಿಕದಲ್ಲಿ ಬ್ಯಾಂಕ್ಗಳು ದಿವಾಳಿಯಾಗುತ್ತಿರುವ ಹಿನ್ನೆಲೆ ಅಧ್ಯಕ್ಷ ಜೋ ಬೈಡನ್ಗೆ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರು ಈ ಕುರಿತು ಪ್ರಶ್ನೆಯನ್ನು ಕೇಳಿದ್ದರು. ಆದರೆ ಯುಎಸ್ ಅಧ್ಯಕ್ಷ ಅವರ ಪ್ರಶ್ನೆಗಳನ್ನು ನಿರ್ಲಕ್ಷಿಸಿ ಹೊರನಡೆದಿದ್ದಾರೆ. ಇದರಿಂದ ಬೈಡನ್ ಭಾರೀ ಟೀಕೆಗೆ ಗುರಿಯಾಗಿದ್ದಾರೆ.
 
ಬೈಡನ್ ಸುದ್ದಿಗೋಷ್ಠಿಯಲ್ಲಿ ಕೊನೆಯದಾಗಿ ಚೇತರಿಸಿಕೊಳ್ಳುವ ಬ್ಯಾಂಕಿಂಗ್ ವ್ಯವಸ್ಥೆಯನ್ನು ನಿರ್ವಹಿಸುವುದು ಹಾಗೂ ನಮ್ಮ ಐತಿಹಾಸಿಕ ಚೇತರಿಕೆಯನ್ನು ರಕ್ಷಿಸುವಲ್ಲಿ ಕೆಲಸ ಮಾಡುವುದಾಗಿ ತಿಳಿಸಿ ಮಾತನ್ನು ಮುಗಿಸಿದ್ದಾರೆ.

ಈ ವೇಳೆ ವರದಿಗಾರರೊಬ್ಬರು, ಬ್ಯಾಂಕ್ಗಳು ಏಕೆ ದಿವಾಳಿಯಾಗುತ್ತಿದೆ? ನೀವು ಇನ್ನು ಮುಂದೆ ಈ ರೀತಿ ಬ್ಯಾಂಕ್ಗಳು ದಿವಾಳಿಯಾಗುವುದಿಲ್ಲ ಎಂದು ಅಮೆರಿಕನ್ನರಿಗೆ ಭರವಸೆ ನೀಡಬಹುದೇ ಎಂದು ಪ್ರಶ್ನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ವರದಿಗಾರರ ಪ್ರಶ್ನೆಗೆ ಉತ್ತರಿಸದೇ ಅಲ್ಲಿಂದ ಕಾಲ್ಕಿತ್ತಿದ್ದಾರೆ. ಇದೇ ವೇಳೆ ಮತ್ತೊಬ್ಬ ವರದಿಗಾರರು ಈಗಾಗಲೇ ದಿವಾಳಿಯಾಗಿರುವ ಬ್ಯಾಂಕುಗಳಂತೆ ಇತರ ಬ್ಯಾಂಕುಗಳ ಸ್ಥಿತಿಯೂ ಆಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ಆದರೆ ಬೈಡನ್ ವರದಿಗಾರರೆಡೆ ಕಣ್ಣು ಹಾಯಿಸದೇ ಸುದ್ದಿಗೋಷ್ಠಿ ನಡೆಯುತ್ತಿದ್ದ ಕೊಠಡಿಯನ್ನು ತೊರೆದಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ