ಬಿಬಿಸಿ ನಿರೂಪಕ ನೊಬ್ಬ ತನ್ನ ಕೆಲಸದಲ್ಲಿ ತಲ್ಲೀನರಾಗಿದ್ದ ಸಂದರ್ಭ ಅಡಚಣೆಗೆ ಮುಂದಾದ ಮಹಿಳೆಯನ್ನ ತಡೆಯುವ ಯತ್ನದಲ್ಲಿ ಅಚಾತುರ್ಯವಾಗಿ ಎದೆ ಮುಟ್ಟಿ ಬಳಿಕ ಆಕೆಯಿಂದ ಒದೆ ತಿಂದ ಪ್ರಕರಣ ಬೆಳಕಿಗೆ ಬಂದಿದೆ.
ಬಿಬಿಸಿ ನಿರೂಪಕ ಬೆನ್ ಬ್ರೌನ್ ಲೈವ್`ನಲ್ಲಿ ತಮ್ಮ ಸಹೋದ್ಯೋಗಿ ಸಹಾಯಕ ರಾಜಕೀಯ ಸಂಪಾದಕ ನಾರ್ಮನ್ ಸ್ಮಿತ್ ಜೊತೆ ಲೇಬರ್ ಪಾರ್ಟಿಯ ಚುನಾವಣಾ ಪ್ರಣಾಳಿಕೆ ಬಗ್ಗೆ ಮಾತನಾಡುತ್ತಿದ್ದ ಸಂದರ್ಭ, ಮಹಿಳೆಯೊಬ್ಬರು ಮಧ್ಯಪ್ರವೇಶಿಸಿದ್ದಾರೆ.
ಈ ಸಂದರ್ಭ ಮಹಿಳೆಯನ್ನ ಪಕ್ಕಕ್ಕೆ ಸರಿಸುವ ಯತ್ನದಲ್ಲಿ ಬ್ರೌನ್ ಮಹಿಳೆಯ ಎದೆ ಮುಟ್ಟಿದ್ದಾನೆ. ಕೋಪಗೊಂಡ ಮಹಿಳೆ ಸರಿಯಾಗಿಯೇ ಬಾರಿಸಿರುವ ವಿಡಿಯೋ ಲೈವ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ