ಮಿಸ್ ವರ್ಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ಮುಡಿಗೇರಿಸಿಕೊಂಡ ಭೂಮಿಕಾ ಶರ್ಮಾ

ಬುಧವಾರ, 28 ಜೂನ್ 2017 (08:26 IST)
ನವದೆಹಲಿ:ಪುರುಷರಿಗೆ ಸರಿಸಮಾನವಾಗಿ ಎಲ್ಲಾ ಕ್ಷೇತ್ರಗಳಲ್ಲೂ ಮುನ್ನುಗ್ಗಿ ಸಾಧನೆ ಮಾಡಿರುವ ಮಹಿಳೆಯರು ಈಗ ಬಾಡಿ ಬಿಲ್ಡಿಂಗ್ ಕ್ಷೇತ್ರಕ್ಕೂ ಲಗ್ಗೆ ಇಟ್ಟಿದ್ದಾರೆ. ಕೇವಲ 21 ವರ್ಷದ ಭಾರತದ ಈ ಯುವತಿ ಮಿಸ್ ವಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾಳೆ. ಅಚ್ಚರಿ ಆಗತ್ತೆ ಅಲ್ವಾ. ನಿಜ. ಭಾರತದ ಭೂಮಿಕಾ ಶರ್ಮಾ ಮಿಸ್ ವಲ್ಡ್ ಬಾಡಿ ಬಿಲ್ಡಿಂಗ್ ಚಾಂಪಿಯನ್ ಶಿಪ್ ನ್ನು ಮುಡಿಗೇರಿಸಿಕೊಳ್ಳುವ ಮೂಲಕ ಭಾರತದ ಕೀರ್ತಿ ಮೆರೆದಿದ್ದಾರೆ.
 
ಬಾಡಿ ಫೋಸಿಂಗ್, ವೈಯಕ್ತಿಕ ಫೋಸಿಂಗ್ ಹಾಗೂ ಫಾಲ್ ವಿಭಾಗದಲ್ಲಿ ಗರಿಷ್ಟ ಅಂಕ ಪಡೆದ  ಭೂಮಿಕಾ ಶರ್ಮಾ ಈ ಈ ಸಾಧನೆ ಮಾಡಿದ್ದಾರೆ. ಡೆಹ್ರಾಡೂನ್  ಮೂಲದವರಾದ ಭೂಮಿಕಾ  ವಿಶ್ವಾದ್ಯಂತ 50 ಸ್ಪರ್ದಿಗಳಲ್ಲಿ ಭಾರತದಿಂದ ಭಾಗವಹಿಸಿದ 27 ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದರು.
 
ಭೂಮಿಕಾ ಬಾಡಿ ಬಿಲ್ಡಿಂಗ್ ವೃತ್ತಿ ಆಯ್ಕೆ ಮಾಡಿಕೊಳ್ಳಲು ಆಕೆ ತಾಯಿಯ ಮಾರ್ಗದರ್ಶನ ಕಾರಣ. ಭೂಮಿಕಾ ತಾಯಿ ಹನ್ಸಾ ಮನ್ರಾಲ್ ಶರ್ಮಾ, ಭಾರತೀಯ ಮಹಿಳಾ ವೇಟ್ ಲಿಫ್ಟಿಂಗ್ ತಂಡದ ಮುಖ್ಯ ತರಬೇತುದಾರರಾಗಿದ್ದಾರೆ. ಚಿಕ್ಕಂದಿನಿಂದಲೂ ಶೂಟಿಂಗ್ ನಲ್ಲಿ ಆಸಕ್ತಿ ಹೊಂದಿದ್ದ ಭೂಮಿಕಾ ಕ್ರಮೇಣ ಬಾಡಿ ಬಿಲ್ಡರ್ ವೃತ್ತಿ ಆಯ್ಕೆ ಮಾಡಿಕೊಂಡರು. ಇದು  ಅವರು ವಿಶ್ವ ಬಾಡಿ ಬಿಲ್ಡರ್ ಚಾಂಪಿಯನ್ ಶಿಪ್ ಗೆಲ್ಲಲು ಸಹಕಾರಿಯಾಯಿತಂತೆ. ಸಧ್ಯ ಭೂಮಿಕಾ ಡಿಸೆಂಬರ್ ನಲ್ಲಿ ನಡೆಯುವ ವಿಶ್ವ ಯುನಿವರ್ಸ್ ಚಾಂಪಿಯನ್ ಶಿಪ್ ಗೆ ಸಿದ್ಧತೆ ನಡೆಸುತ್ತಿದ್ದಾರೆ.    
 

ವೆಬ್ದುನಿಯಾವನ್ನು ಓದಿ