ಕಪ್ಪು ಹಣ: ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ಸ್ವಿಸ್ ಸಮ್ಮತಿ
ಶುಕ್ರವಾರ, 16 ಜೂನ್ 2017 (23:29 IST)
ಬರ್ನ್:ಕಪ್ಪು ಹಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ನೆರವಾಗಲು ಭಾರತ ಹಾಗೂ ಇತರ 40 ದೇಶಗಳೊಂದಿಗೆ ಹಣಕಾಸು ಖಾತೆಗಳ ಸ್ವಯಂಚಾಲಿತ ಮಾಹಿತಿ ವಿನಿಮಯಕ್ಕೆ ವ್ಯವಸ್ಥೆಗೆ ಸ್ವಿಟ್ಸರ್‌ಲ್ಯಾಂಡ್, ಒಪ್ಪಿಗೆ ನೀಡಿದೆ.
ತೆರಿಗೆ ಹಾಗೂ ಹಣಕಾಸು ವ್ಯವಹಾರ ಸಂಬಂಧದ ಮಾಹಿತಿಗಳ "ಆಟೋಮ್ಯಾಟಿಕ್ ಎಕ್ಸ್‌ಚೇಂಜ್ ಆಫ್ ಇನ್‌ಫಾರ್ಮೇಶನ್' ಎಂಬ ಜಾಗತಿಕ ಒಡಂಬಡಿಕೆಗೆ ಅನುಮೋದನೆ ನೀಡಿರುವ ಸ್ವಿಸ್ ಫೆಡರಲ್ ಕೌನ್ಸಿಲ್ "2018ರಿಂದ ಇದನ್ನು ಜಾರಿಗೆ ತರಲು ಉದ್ದೇಶಿಸಲಾಗಿದೆ ಮತ್ತು 2019ರಲ್ಲಿ ಮೊದಲ ಕಂತಿನ ಮಾಹಿತಿಯನ್ನು ವಿನಿಮಯಿಸಲಾಗುವುದು' ಎಂದು ಹೇಳಿದೆ.
ಆದರೆ ತಾನು ವಿನಿಮಯಿಸುವ ಹಣಕಾಸು ಮಾಹಿತಿಗಳ ಪಾರದರ್ಶಕತೆ ಹಾಗೂ ಭದ್ರತೆಯನ್ನು ಕಾಪಾದುವಂತೆ ಸ್ವಿಸ್ ಸೂಚಿಸಿದೆ.