2017: ಬ್ರಿಟನ್ ಸ್ವಾಗತಿಸಿದ ಮೊದಲ ಮಗು ಭಾರತೀಯರದ್ದು

ಬುಧವಾರ, 4 ಜನವರಿ 2017 (11:40 IST)
ಹೊಸ ವರ್ಷದ ಆರಂಭದಲ್ಲಿ ಬ್ರಿಟನ್‌ನಲ್ಲಿ ಹುಟ್ಟಿದ ಪ್ರಥಮ ಮಗು ಎಂಬ ಹೆಗ್ಗಳಿಕೆ ಭಾರತೀಯ ಮೂಲದ ಪೋಷಕರ ಕಂದನಿಗೆ ದೊರೆತಿದೆ. 
ಜನವರಿ 1, 2017 ಆರಂಭವಾದ ಬಳಿಕ 12 ಗಂಟೆ 1 ನಿಮಿಷಕ್ಕೆ ಭಾರತೀಯ ಮೂಲದ ಭಾರತಿದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಇದು 2017ರಲ್ಲಿ ಬ್ರಿಟನ್‌ ಸ್ವಾತಿಸಿದ ಮೊದಲ ಮಗುವಾಗಿದೆ. 
 
ಲಂಡನ್ನಿನ ವೆಸ್ಟ್‌ಮಿನಿಸ್ಟರ್ ಅರಮನೆಯ ಉತ್ತರ ಭಾಗದಲ್ಲಿ ಬಿಗ್‌ಬೆನ್ ಗಂಟಾನಾದ ಮೊಳಗಿದ ಕೆಲವೇ ಕ್ಷಣದಲ್ಲಿ ಬ್ರಮ್ಮಿಂಗ್ ಹ್ಯಾಮ್ ಸಿಟಿ ಆಸ್ಪತ್ರೆಯಲ್ಲಿ  ಭಾರತಿದೇವಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ.  
 
ಮಗುವಿಗೆ ಎಲಿನಾ ಕುಮಾರಿ ಎಂದು ಹೆಸರಿಡಲಾಗಿದ್ದು, ಇದು ಎಂಟು ಔನ್ಸ್ ತೂಕವಿದೆ.
 
ಮಗುವಿನ ತಂದೆ ಅಶ್ವಿನಿ ಕುಮಾರ್ ಮಾರಾಟ ಸಹಾಯಕರಾಗಿ ಕೆಲಸ ಮಾಡುತ್ತಿದ್ದು, ದಂಪತಿಗೆ ಇದು ಎರಡನೆಯ ಮಗು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ