ಬ್ರಿಟನ್‌ ಉಪ ಪ್ರಧಾನಿ ಡೊಮಿನಿಕ್‌ ರಾಬ್‌ ರಾಜೀನಾಮೆ

ಶನಿವಾರ, 22 ಏಪ್ರಿಲ್ 2023 (11:35 IST)
ಲಂಡನ್ : ಬ್ರಿಟನ್ ಉಪ ಪ್ರಧಾನಿ ಡೊಮಿನಿಕ್ ರಾಬ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸಹೋದ್ಯೋಗಿಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂಬ ದೂರುಗಳ ಬಗ್ಗೆ ಸ್ವತಂತ್ರ ತನಿಖೆ ಕೈಗೊಂಡ ಬೆನ್ನಲ್ಲೇ ಅವರು ರಾಜೀನಾಮೆ ಸಲ್ಲಿಸಿದ್ದಾರೆ.
 
ಪ್ರಧಾನಿ ರಿಷಿ ಸುನಕ್ಗೆ ಬರೆದ ಪತ್ರವನ್ನು ರಾಬ್ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂಬಂಧ ತಕ್ಷಣದ ಪ್ರತಿಕ್ರಿಯೆ ನೀಡಲು ಸುನಾಕ್ ಕಚೇರಿ ನಿರಾಕರಿಸಿದೆ. 

ನಾನು ವಿಚಾರಣೆಗೆ ಕರೆ ನೀಡಿದ್ದೆ. ಬೆದರಿಕೆ ಹಾಕಿದ್ದು ಸಾಬೀತಾದಲ್ಲಿ ರಾಜೀನಾಮೆ ನೀಡುತ್ತೇನೆ ಎಂದಿದ್ದೆ. ಈಗ ನನ್ನ ಮಾತನ್ನು ಉಳಿಸಿಕೊಂಡಿದ್ದೇನೆ ಎಂದು ರಾಬ್ ತಿಳಿಸಿದ್ದಾರೆ.

ರಿಷಿ ಸುನಾಕ್ ಅವರು ಕಳೆದ ವರ್ಷ ಅಕ್ಟೋಬರ್ನಲ್ಲಿ ಬ್ರಿಟನ್ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜೀನಾಮೆ ನೀಡಿದ ಮೂರನೇ ಹಿರಿಯ ಸಚಿವ ರಾಬ್ ಆಗಿದ್ದಾರೆ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ