ಲಾಹೋರ್ : ದೇಶದ್ರೋಹ ಪ್ರಕರಣದಲ್ಲಿ ಪಾಕಿಸ್ತಾನದ ವಿಶೇಷ ನ್ಯಾಯಾಲಯ ಪರ್ವೇಜ್ ಮುಶರಫ್ ಅವರಿಗೆ ವಿಧಿಸಿದ ಮರಣದಂಡನೆಯನ್ನು ಲಾಹೋರ್ ಹೈಕೋರ್ಟ್ ರದ್ದುಪಡಿಸಿದೆ.
ಪಾಕಿಸ್ತಾನದ ವಿಶೇಷ ನ್ಯಾಯಾಲಯವೊಂದು ಪರ್ವೇಜ್ ಮುಶರಫ್ ಅವರಿಗೆ ಮರಣದಂಡನೆಯನ್ನು ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪನ್ನು ಪ್ರಶ್ನಿಸಿ ಮುಶರಫ್ ಲಾಹೋರ್ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು.
ಸೋಮವಾರ ಈ ಅರ್ಜಿಯ ವಿಚಾರಣೆ ನಡಸಿದ ಹೈಕೋರ್ಟ್ ನ ತ್ರಿಸದಸ್ಯ ನ್ಯಾಯಪೀಠ ಮರಣದಂಡನೆ ಶಿಕ್ಷೆವಿಧಿಸಿದ್ದು ಕಾನೂನು ಬಾಹಿರ ಎಂದು ಹೇಳಿ ಅದನ್ನು ರದ್ದುಗೊಳಿಸಿದೆ.