ಕಾರು ಖರೀದಿಸಲು 4 ಚೀಲಗಳಲ್ಲಿ ನೋಟಿನ ಕಂತೆ ತಂದು ಸುರಿದ ಮಹಿಳೆ..!
ಬುಧವಾರ, 23 ಆಗಸ್ಟ್ 2017 (17:21 IST)
ಈ ಚಿತ್ರ ನೋಡಿದರೆ ನಿಮಗೆ ಕನ್ನಡದ ದಿಗ್ಗಜರು ಚಿತ್ರದ ದೃಶ್ಯ ನೆನಪಿಗೆ ಬರುತ್ತೆ. ಕಾರನ್ನ ಖರೀದಿಸಲು ಅಂಬರೀಷ್ ಮತ್ತು ವಿಷ್ಣುವರ್ಧನ್ ಚೀಲದಲ್ಲಿ ಹಣತಂದು ಸುರಿಯುತ್ತಾರೆ. ಇಂಥದ್ದೇ ಒಂದು ಘಟನೆ ಚೀನಾದಲ್ಲಿ ನಡೆದಿದೆ.
ಮಹಿಳೆಯೊಬ್ಬರು ಕಾರು ಖರೀದಿಸಲು 4 ಚೀಲಗಳಲ್ಲಿ 1 ಯುವಾನ್ ನೋಟುಗಳನ್ನೊಳಗೊಂಡ ಚೀಲಗಳನ್ನ ತುಂಬಿಕೊಂಡು ಕಾರಿನ ಶೋ ರೂಮ್`ಗೆ ಬಂದಿದ್ದಾರೆ. 4 ಚೀಲಗಳಲ್ಲಿ 1 ಯುವಾನ್ ನೋಟುಗಳ 130,000 ಯುವಾನ್(12.5 ಲಕ್ಷ ರೂ.)`ನಷ್ಟು ಹಣವಿತ್ತು. ಈ ಹಣವನ್ನ ರಾಶಿ ಹಾಕಿ ಎಣಿಸಲು ಕಾರು ಶೋರೂಮ್`ನ 10 ಮಂದಿ ಒಂದು ಗಮಟೆ ಕಾಲ ಶ್ರಮಪಟ್ಟಿದ್ದಾರೆ.
ಕನ್`ಸ್ಟ್ರಕ್ಷನ್ ಬ್ಯುಸಿನೆಸ್ ನಡೆಸುತ್ತಿರುವ ಮಹಿಳೆ 4 ಚೀಲಗಳಲ್ಲಿ 1 ಯುವಾನ್ ನೋಟುಗಳನ್ನ ತುಂಬಿ ಇಟ್ಟುಕೊಂಡಿದ್ದರು. ಕಾರ್ ಶೋರೂಮಿನಲ್ಲಿ ಚಿಲ್ಲರೆ ನೋಟುಗಳನ್ನ ಪಡೆಯುವುದಾಗಿ ಅರಿತ ಮಹಿಳೆ ಚೀಲದಲ್ಲಿದ್ದ ಹಣವನ್ನ ತಂದು ಸುರಿದಿದ್ದಾರೆ.
`ದೂರವಾಣಿ ಕರೆ ಮಾಡಿದ್ದ ಮಹಿಳೆ ಕಡಿಮೆ ಮುಖಬೆಲೆಯ ನೋಟುಗಳನ್ನ ಪಡೆಯುತ್ತೀರಾ ಎಂದು ಕೇಳಿದರು. ನಾವು ಪಡೆಯುತ್ತೇವೆ ಎಂದು ಉತ್ತರಿಸಿದೆವು. ಬಳಿಕ ಆ ಮಹಿಳೆ ಬಂದಾಗ 4 ಚೀಲಗಳಲ್ಲಿ 1 ಯುವಾನ್ ಮುಖಬೆಲೆಯ ನೋಟುಗಳನ್ನ ತಂದಿದ್ದರು. ಎಣಿಸಲು ಗಂಟೆ ವ್ಯಯಿಸಬೇಕಾಯ್ತು ಎಂದು ಸೋರೂಮ್ ಸಿಬ್ಬಂದಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ