18 ವರ್ಷಗಳ ವರೆಗೆ ಭ್ರೂಣ ಶೇಖರಿಸಿ ಆರೋಗ್ಯಕರ ಮಗು ಪಡೆದ ಚೀನಾ ಮಹಿಳೆ

ಶುಕ್ರವಾರ, 1 ಜುಲೈ 2016 (12:30 IST)
18 ವರ್ಷದಿಂದ ಭ್ರೂಣವನ್ನು ಶೇಖರಿಸಿ ಚೀನಾ ಮಹಿಳೆಯೊಬ್ಬಳು ಆರೋಗ್ಯವಾಗಿರುವ ಮಗುವೊಂದನ್ನು ಪಡೆದಿರುವುದು ಪತ್ತೆಯಾಗಿದೆ. ಶೇಖರಿಸಿ ಇಟ್ಟ ಘನೀಕೃತ ಭ್ರೂಣವನ್ನು ಉಪಯೋಗಿಸಿ ಆರೋಗ್ಯಕರ ಮಗುವನ್ನು ಚೀನಾ ಮಹಿಳೆ ಪಡೆದಿದ್ದಾಳೆ. ಮಗುವಿನ ತೂಕ 3,300 ಕೆ.ಜಿ ಯಷ್ಟಿದ್ದು, ಸೋಮವಾರದಂದು ಜಿಯಾಂಗ್ಸು ಪ್ರಾಂತ್ಯದಲ್ಲಿ ಮಗುವಿಗೆ ಜನ್ಮ ನೀಡಿರುವುದು ತಿಳಿದು ಬಂದಿದೆ. 

 
ಮೊದಲು ಈ ಮಹಿಳೆ ಫೈಲೋಪಿಯನ್ ಡ್ಯೂಬ್ ಸಮಸ್ಯೆಯಿಂದ ಬಳಲುತ್ತಿದ್ದಳು. 1990ರಲ್ಲಿ ಆಕೆ ವಿಟ್ರೋ ಫರ್ಟಿಲೇಷನ್ (ಐವಿಎಫ್) ಚಿಕಿತ್ಸೆ ಪಡೆದುಕೊಂಡಿದ್ದಳು. ಆದ್ರೂ ಆಕೆ ಗರ್ಭಿಣಿಯಾಗಿರಲಿಲ್ಲ. ಆದ್ದರಿಂದ 2015ರಲ್ಲಿ ಭ್ರೂಣವನ್ನು ಗರ್ಭಕೋಶಕ್ಕೆ ಸೇರಿಸಲಾಗಿತ್ತು ಎಂದು ವರದಿಗಳಿಂದ ತಿಳಿದು ಬಂದಿದೆ. 
 
ಇನ್ನೂ 2015ರಲ್ಲಿ ಮತ್ತೆ ಪ್ರಯತ್ನ ಮಾಡಲು ಈ ಮಹಿಳೆ ಆಸ್ಪತ್ರೆಗೆ ತೆರಳಿದ್ದಳು. ಈ ವೇಳೆ ಆಕೆಗೆ ಹೈಡ್ರೋಸ್ಲ್ಯಾಪಿನ್ಸ್ ಇರುವುದು ತಿಳಿದು ಬಂದಿರುವುದರಿಂದ ಶಸ್ತ್ರಚಿಕಿತ್ಸೆ ಬಳಿಕ ಆಕೆಗೆ ಭ್ರೂಣವನ್ನು ಒಳಸೇರಿಸಲಾಗಿತ್ತು. 
 
ಘನೀಕೃತ ಭ್ರೂಣವು ಲಿಕ್ವೀಡ್ ನೈಟ್ರೋಜನ್ ಒಳಗೆ 196 ಡಿಗ್ರಿ ಸೆಲ್ಸಿಯಸ್ ಶೇಖರಣೆಯಾಗುತ್ತದೆ. ಶಘಾಯಿ ಆರೋಗ್ಯ ಕೇಂದ್ರದ ಪ್ರಕಾರ ಘನೀಕೃತ ಭ್ರೂಣವನ್ನು 5 ವರ್ಷಗಳ ವರೆಗೆ ಶೇಖರಿಸಿ ಇಡಬಹುದು ಎನ್ನಲಾಗಿದೆ. 
 
ನಿಜ ಹೇಳಬೇಕಾದರೆ, ನಾವು ತುಂಬಾ ವರ್ಷಗಳ ವರೆಗೆ ಭ್ರೂಣವನ್ನು ಶೇಖರಿಸಿ ಇಡುತ್ತೇವೆ, ರೋಗಿಗಳು ಕೇಳಿದಾಗ ಮಾಡಲಾಗುತ್ತದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ. ಚೀನಾ ದೇಶ ಒಂದು ಮಗುವಿನ ಪಾಲಸಿಯನ್ನು ಅನುಸರಿಸುತ್ತಿದೆ. ಆದ ಕಾರಣ ಚೀನಾ ದೇಶದಲ್ಲಿ ವಯಸ್ಸಾದ ಮಹಿಳೆಯರ ಬಂಜೆತನದ ಸಮಸ್ಯೆಗಳಿಂದ ಬಳಲುತ್ತಿದ್ದಾರೆ, ಇದರ ನಿವಾರಣೆಗಾಗಿ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ ಎಂದು ಹೇಳಲಾಗ್ತಿದೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ