ಕೊಲಂಬಿಯಾ ಅಧ್ಯಕ್ಷ ಜುವಾನ್ ಮ್ಯಾನುವೆಲ್‌ ಸಾಂತೋಸ್‌ಗೆ ಶಾಂತಿ ನೊಬೆಲ್ ಪ್ರಶಸ್ತಿ

ಶುಕ್ರವಾರ, 7 ಅಕ್ಟೋಬರ್ 2016 (18:01 IST)
ಮಾರ್ಕ್ಸ್‌ವಾದಿ ಬಂಡುಕೋರರೊಂದಿಗೆ ಒಪ್ಪಂದ ಮಾಡಿಕೊಂಡು 52 ವರ್ಷಗಳ ಹೋರಾಟವನ್ನು ಶಾಂತಿಯುತವಾಗಿ ಅಂತ್ಯಗೊಳಿಸಿದಕ್ಕಾಗಿ ಕೊಲಂಬಿಯಾದ ಅಧ್ಯಕ್ಷ ಜುವಾನ್ ಮ್ಯಾನುವಲ್ ಸಾಂತೋಸ್ ಅವರಿಗೆ ಪ್ರಸಕ್ತ ವರ್ಷದ ಶಾಂತಿ ನೊಬೆಲ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
 
ಶಾಂತಿ ನೊಬೆಲ್ ಪ್ರಶಸ್ತಿ ಕೊಲಂಬಿಯಾದ ಜನತೆಗೆ ನೀಡಿದ ಗೌರವದಂತೆ ಎಂದು ನೊಬೆಲ್ ಪ್ರಶಸ್ತಿ ಸಮಿತಿ ಸದಸ್ಯ ಕಾಸಿ ಕುಲ್‌ಮನ್ ತಿಳಿಸಿದ್ದಾರೆ.   
 
ಕೊಲಂಬಿಯಾ ಸೇನಾಪಡೆ ಮತ್ತು ಮಾರ್ಕ್‌ವಾದಿ ಬಂಡುಕೋರರು ಶಾಂತಿ ಸ್ಥಾಪನೆಗೆ ಸಮ್ಮತಿ ಸೂಚಿಸಿದ್ದಾರೆ. ಆದರೆ, ಒಪ್ಪಂದ ಸಂಪೂರ್ಣವಾಗಿ ಅಂಗೀಕಾರವಾಗಿಲ್ಲ ಎಂದು ಹೇಳಿದ್ದಾರೆ.
 
ಮಾರ್ಕ್‌ವಾದಿ ಬಂಡುಕೋರರ ಮುಖ್ಯಸ್ಥ, ಗೆರಿಲ್ಲಾ ನಾಯಕ ರೊಡ್ರಿಗೋ ಲೊಂಡೊನೋ, ಕೊಲಂಬಿಯಾದ ಅಧ್ಯಕ್ಷ ಸಾಂತೋಸ್‌ರೊಂದಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ