ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಪತ್ನಿ ಹೀಗಾ ಮಾಡೋದು?
ಸೋಮವಾರ, 7 ಸೆಪ್ಟಂಬರ್ 2020 (13:00 IST)
ಆಫ್ರಿಕಾ : ಇಲಿಯನ್ನು ಓಡಿಸಲು ನಿರಾಕರಿಸಿದ ಪತಿಗೆ ಪತ್ನಿ ನೀಡಿದ ಶಿಕ್ಷೆ ಏನೆಂದು ಕೇಳಿದರೆ ಶಾಕ್ ಆಗ್ತೀರಾ.
ಹೌದು. ಜಾಂಬಿಯಾದ ಕಿಟ್ಟೆ ಪಟ್ಟಣದಲ್ಲಿ ಮುಕುಪಾ( 40) ಎಂಬ ಮಹಿಳೆ ಗೆಳೆಯರೊಂದಿಗೆ ಪಾರ್ಟಿ ಮುಗಿಸಿ ಮದ್ಯದ ಅಮಲಿನಲ್ಲಿ ಮನೆಗೆ ಬಂದಾಗ ತನ್ನ ಬೆಡ್ ರೂಂನಲ್ಲಿ ಇಲಿಯನ್ನು ಕಂಡಿದ್ದಾಳೆ. ಅದನ್ನು ಓಡಿಸಲು ಪತಿಗೆ ಹೇಳಿದ್ದಾಳೆ. ಆದರೆ ನಿದ್ದೆಯ ಮಂಪರಿನಲ್ಲಿದ್ದ ಪತಿ ಇಲಿ ಓಡಿಸಲು ನಿರಾಕರಿಸಿದ್ದಾನೆ.
ಇದರಿಂದ ಮಹಿಳೆ ಕೋಪಗೊಂಡು ಪತಿಯೊಂದಿಗೆ ಜಗಳಕ್ಕಿಳಿದು ಆತನ ಜನನಾಂಗವನ್ನೇ ಕಚ್ಚಿದ್ದಾಳೆ. ಪತಿಯ ಕಿರುಚಾಟ ಕೇಳಿ ಅಲ್ಲಿಗೆ ಬಂದ ಸ್ಥಳೀಯರು ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.