ಅಮೆರಿಕದ ಅಗಸ್ಟಾದಲ್ಲಿ ವ್ಯಕ್ತಿಯೊಬ್ಬ ಮನೆ ಯಲ್ಲಿ ತಿಗಣೆ ಕಾಟವಿದೆ. ಅದರ ನಿಯಂತ್ರಣ ಕೋರಿ ಅರ್ಜಿ ಸಲ್ಲಿಸಬೇಕು ಎಂದು ಪಾಲಿಕೆ ಕಚೇರಿಗೆ ಬಂದಿದ್ದ. ಆದರೆ, ಅರ್ಜಿ ನೀಡಲು ಸಿಬ್ಬಂದಿ ನಿರಾಕರಿಸಿದ್ದರು.ಇದರಿಂದ ಆತನ ಸಿಟ್ಟು ನೆತ್ತಿಗೇರಿದೆ. ತಾನು ತಂದಿದ್ದ ಚೀಲದೊಳಗಿದ್ದ ಕಪ್‌ವೊಂದನ್ನು ಹೊರತೆಗೆದು, ಒಳಗಿದ್ದ 100ಕ್ಕೂ ಹೆಚ್ಚು ತಿಗಣೆಗಳನ್ನು ಕಚೇರಿಯೊಳಕ್ಕೆ ಎಸೆದಿದ್ದಾನೆ. ತಿಗಣೆಗಳು ಸ್ವಾತಂತ್ರ್ಯ ಸಿಕ್ಕ ಸಂತೋಷದಲ್ಲಿ ಬಿರಬಿರನೆ ಹೋಗಿ ಮೂಲೆ ಸೇರಿಕೊಂಡಿವೆ.