ಕೊರೊನಾದಿಂದ ಗುಣಮುಖರಾದವರು ಲೈಂಗಿಕ ಕ್ರಿಯೆ ನಡೆಸುವಾಗ ತಪ್ಪದೇ ಈ ಕೆಲಸ ಮಾಡಿ

ಗುರುವಾರ, 4 ಜೂನ್ 2020 (08:02 IST)
ಲಂಡನ್ : ವಿಶ್ವದಾದ್ಯಂತ ಕೊರೊನಾ ಸೋಂಕು ಹರಡುತ್ತಿರುವ ಹಿನ್ನಲೆಯಲ್ಲಿ ಜೋಡಿಗಳು ಲೈಂಗಿಕ ಕ್ರಿಯೆ ನಡೆಸುವಾಗ ಮಾಸ್ಕ್   ಧರಿಸುವುದು ಉತ್ತಮ ಎಂದು ಹಾರ್ವರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.

ಚೀನಾದ ಡಾ.ಜ್ಯಾಕ್ ಟರ್ಬನ್ ನೇತೃತ್ವದ ವಿದ್ಯಾರ್ಥಿಗಳ ತಂಡ ಲೈಂಗಿಕ ಕ್ರಿಯೆಯ ಮೂಲಕ ಕೊರೊನಾ ಹರಡುತ್ತದೆಯೇ ಎಂಬ ಬಗ್ಗೆ ಸಂಶೋಧನೆ ನಡೆಸಿದೆ. ಅದಕ್ಕಾಗಿ ಕೊರೊನಾ ಸೋಂಕಿನಿಂದ ಗುಣಮುಖರಾದ ಪುರುಷರ ವೀರ್ಯವನ್ನು ಸಂಗ್ರಹಿಸಿ ತಪಾಸಣೆಗೆ ಒಳಪಡಿಸಿದಾಗ ಅವರ ವೀರ್ಯದಲ್ಲಿ ಶೇ.16ರಷ್ಟು ಕೊರೊನಾ ವೈರಸ್ ಇರುವುದು ತಿಳಿದುಬಂದಿದೆ.


ಆದಕಾರಣ ಕೊರೊನಾದಿಂದ ಗುಣಮುಖರಾದವರು ಡಿಸ್ಚಾರ್ಜ್ ಆದ 30 ದಿನಗಳವರೆಗೆ ಸಂಗಾತಿಯಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ಕಿಸ್ ಮಾಡಬಾರದು. 30 ದಿನಗಳ ನಂತರ ಮಾಸ್ಕ್, ಕಾಂಡೋಮ್ ಬಳಸಿ ಲೈಂಗಿಕ ಕ್ರಿಯೆ ನಡೆಸಬೇಕು ಎಂದು ತಿಳಿಸಿದ್ದಾರೆ.  

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ