ಕೊರೊನಾ ವೈರಸ್ ನಿಂದ ರಕ್ಷಿಸಿಕೊಳ್ಳಲು ರಷ್ಯಾದ ಅಧ್ಯಕ್ಷ ಪುಟಿನ್ ಮಾಡಿದ್ದೇನು ಗೊತ್ತಾ?

ಶನಿವಾರ, 20 ಜೂನ್ 2020 (08:42 IST)
ರಷ್ಯಾ : ರಷ್ಯಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಹೆಚ್ಚಾದ ಹಿನ್ನಲೆಯಲ್ಲಿ ವೈರಸ್ ಯಿಂದ ರಕ್ಷಿಸಲು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಗಾಗಿ ಸುರಂಗ ಮಾರ್ಗವೊಂದನ್ನು ನಿರ್ಮಿಸಲಾಗಿದೆ.

ರಷ್ಯಾದಲ್ಲಿ ಕೊರೊನಾ ವೈರಸ್ ವ್ಯಾಪಕವಾಗಿ ಹರಡುತ್ತಿದೆ. ದೇಶದಲ್ಲಿ ಸೋಂಕಿತರ ಸಂಖ್ಯೆ 5 ಲಕ್ಷಕ್ಕೇರಿಕೆಯಾಗಿದೆ. ಅಲ್ಲದೇ ಸೋಂಕಿತರ ಪಟ್ಟಿಯಲ್ಲಿ ರಷ್ಯಾ 3ನೇ ಸ್ಥಾನದಲ್ಲಿದೆ.

ಆದಕಾರಣ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಕೊರೊನಾ ವೈರಸ್ ಸೋಂಕು ತಗುಲದಂತೆ ರಕ್ಷಿಸಲು ಅವರ ಭದ್ರತಾ ಅಧಿಕಾರಿಗಳು ಪ್ರತ್ಯೇಕ ಡಿಸಿನ್ಫೆಕ್ಷನ್ ಸುರಂಗವನ್ನು ವ್ಯವಸ್ಥೆ ಮಾಡಿದ್ದಾರೆ. ರಷ್ಯಾದ ಪೆನ್ಜಾ ನಗರದಲ್ಲಿರುವ ಕಂಪೆನಿಯೊಂದು ಇದನ್ನು ನಿರ್ಮಿಸಿದ್ದು, ಅಧ್ಯಕ್ಷರ ಕಟ್ಟಡಕ್ಕೆ ಬರುವವರು ಈ ಸುರಂಗ ಮಾರ್ಗದ ಮೂಲಕವೇ ಬರುವಂತೆ ವ್ಯವಸ್ಥೆ ಮಾಡಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ