ಡೊನಾಲ್ಡ್ ಟ್ರಂಪ್ ನನ್ನ ರೇಪ್ ಮಾಡಿದ್ದರು : ಇ ಜೀನ್ ಕ್ಯಾರೋಲ್

ಶುಕ್ರವಾರ, 28 ಏಪ್ರಿಲ್ 2023 (13:03 IST)
ವಾಷಿಂಗ್ಟನ್ : ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸುಮಾರು 30 ವರ್ಷಗಳ ಹಿಂದೆ ನನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಅಮೆರಿಕದ ಬರಹಗಾರ್ತಿ ಇ ಜೀನ್ ಕ್ಯಾರೋಲ್ ಆರೋಪಿಸಿದ್ದಾರೆ.
 
ಈ ಬಗ್ಗೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರತಿಷ್ಠಿತ ಎಲ್ಲೆ ಮ್ಯಾಗಜಿನ್ನಲ್ಲಿ ಅಂಕಣಗಾರ್ತಿಯಾಗಿರುವ ಇ ಜೀನ್ ಕ್ಯಾರೋಲ್ (79), ಡೊನಾಲ್ಡ್ ಟ್ರಂಪ್ ನನ್ನ ಮೇಲೆ ಅತ್ಯಾಚಾರವೆಸಗಿದ್ದು, ಈ ಹಿನ್ನೆಲೆ ನಾನು ನ್ಯಾಯಾಲಯದ ಮೊರೆಹೋಗಿದ್ದೇನೆ.

ಈ ಬಗ್ಗೆ ನಾನು ಬರೆದಿದ್ದಾಗ ಟ್ರಂಪ್ ನನ್ನ ಆರೋಪಗಳನ್ನು ಸುಳ್ಳು, ಇಂತಹುದು ಯಾವುದೂ ನಡೆದೇ ಇಲ್ಲ ಎಂದು ಹೇಳಿದ್ದರು. ಅವರು ನನ್ನ ಖ್ಯಾತಿಯನ್ನು ಛಿದ್ರಗೊಳಿಸಿದ್ದಾರೆ. ನನ್ನ ಮಾನವನ್ನು ಮರಳಿ ಪಡೆಯುವ ಸಲುವಾಗಿ ನಾನಿಲ್ಲಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ