ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿದ ಈಜಿಪ್ಟಿನ ಕೋರ್ಟ್

ಸೋಮವಾರ, 31 ಡಿಸೆಂಬರ್ 2018 (06:52 IST)
ಕೈರೋ : ಕೋತಿಗೆ ಲೈಂಗಿಕ ಕಿರುಕುಳ ನೀಡಿದ ಮಹಿಳೆಯೊಬ್ಬಳಿಗೆ ಈಜಿಪ್ಟಿನ ಕೋರ್ಟ್ ಮೂರು ವರ್ಷಗಳ ಕಾಲ ಜೈಲು ಶಿಕ್ಷೆಯನ್ನು ವಿಧಿಸಿದೆ.


ಬಸ್ಮಾ ಅಹ್ಮದ್ (25 ವರ್ಷ) ಶಿಕ್ಷೆಗೆ ಗುರಿಯಾಗಿರುವ ಮಹಿಳೆ. ಈಕೆ ಮ್ಯಾನ್ಸೌರದಲ್ಲಿರುವ ನೈಲ್ ಡೆಲ್ಟಾ ನಗರದಲ್ಲಿ ಪ್ರಾಣಿಗಳ ಅಂಗಡಿಗೆ ಹೋಗಿದಾಗ ಅಲ್ಲಿದ್ದ ಕೋತಿಯ ಜನನಾಂಗವನ್ನು ಮುಟ್ಟಿ ಹಿಂಸಿಸುತ್ತಿದ್ದಳು. ಇದನ್ನು ಸ್ಥಳದಲ್ಲಿದ್ದವರು ತಮ್ಮ ಮೊಬೈಲ್ ಗಳಲ್ಲಿ ವಿಡಿಯೋ ಮಾಡಿಕೊಂಡು ಅದನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ. ಹೀಗಾಗಿ ಈ ವಿಡಿಯೋ ವೈರಲ್ ಆಗಿದ್ದು, ಈಕೆಯನ್ನು ಬಂಧಿಸಲಾಗಿತ್ತು.


ಈ ಬಗ್ಗೆ ಮಹಿಳೆ ಕೋರ್ಟ್ ನಲ್ಲಿ ತಪ್ಪೊಪ್ಪಿಕೊಂಡಿರುವ ಹಿನ್ನಲೆಯಲ್ಲಿ ಈ ಕುರಿತು ತನಿಖೆ ನಡೆಸಿದ ಮ್ಯಾನ್ಸೌರಾ ನ್ಯಾಯಾಲಯ ಇದೀಗ ಮಹಿಳೆಗೆ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ