ವೆನೆಝುವೆಲಾದ ನೈಟ್‌ಕ್ಲಬ್‌ ನಲ್ಲಿ ಅಶ್ರುವಾಯು ಸ್ಫೋಟ ; ನೂಕುನುಗ್ಗಲಿಗೆ 17 ಜನರು ಬಲಿ

ಸೋಮವಾರ, 18 ಜೂನ್ 2018 (14:20 IST)
ಕಾರಾಕಸ್ : ವೆನೆಝುವೆಲಾದ ರಾಜಧಾನಿ ಕಾರಾಕಸ್‌ನ ನೈಟ್‌ಕ್ಲಬ್‌ವೊಂದರಲ್ಲಿ ಅಶ್ರುವಾಯು ಗ್ರೆನೇಡ್ ಸ್ಫೋಟಿಸಿದ ಕಾರಣ ಉಂಟಾದ ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.


ಎಲ್ ಪ್ಯಾರಾಸಿಯೊ ಪ್ರದೇಶದಲ್ಲಿನ 'ಲಾಸ್ ಕೊಟೊರಸ್' ಕ್ಲಬ್‌ನಲ್ಲಿ ಮಿಡ್ಲ್ ಸ್ಕೂಲ್‌ವೊಂದರ ಗ್ರಾಜ್ಯುಯೇಷನ್ ಪಾರ್ಟಿಯಲ್ಲಿ ಎರಡು ಗುಂಪುಗಳ ನಡುವೆ  ಹೊಡೆದಾಟ ನಡೆದಿದ್ದು, ಆ ವೇಳೆ ಬಾತ್‌ರೂಮಿನಲ್ಲಿ ಅಶ್ರುವಾಯು ಬಾಂಬ್‌ನ್ನು ಸಿಡಿಸಲಾಗಿತ್ತು. ಆಗ ಜನರು ಜೀವವುಳಿಸಿಕೊಳ್ಳಲು ಏಕಕಾಲದಲ್ಲಿ ಮುಚ್ಚಿದ್ದ ಬಾಗಿಲುಗಳತ್ತ ಧಾವಿಸಿದ್ದ ಕಾರಣ ಉಂಟಾದ  ನೂಕುನುಗ್ಗಲಿನಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ.


ಅಶ್ರುವಾಯು ಬಾಂಬ್‌ನ್ನು ಸ್ಫೋಟಿಸಿದ್ದರೆನ್ನಲಾದ ಇಬ್ಬರು ಅಪ್ರಾಪ್ತ ವಯಸ್ಕರು ಸೇರಿದಂತೆ ಎಂಟು ಜನರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಹಾಗೇ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದಿದ್ದಕ್ಕೆ ಮತ್ತು ಅಶ್ರುವಾಯು ಬಾಂಬ್ ಒಳಗೆ ತರುವುದನ್ನು ತಡೆಯದಿದ್ದಕ್ಕಾಗಿ ಕ್ಲಬ್‌ನ ಮಾಲಿಕನನ್ನು ಪೊಲೀಸರು ಬಂಧಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ