ಕೃತಕ ಬುದ್ಧಿಮತ್ತೆ ಮೂಲಕ ಫೇಸ್ ಬುಕ್ ನಿಂದ ಭಯೋತ್ಪಾದನೆಗೆ ಕಡಿವಾಣ

ಶನಿವಾರ, 17 ಜೂನ್ 2017 (09:55 IST)
ಸ್ಯಾನ್ ಫ್ರಾನ್ಸಿಸ್ಕೋ:  ಭಯೋತ್ಪಾದನೆಯನ್ನು ತಡೆಯುವುದಕ್ಕೆ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡುವುದಾಗಿ ಫೇಸ್ ಬುಕ್ ಹೇಳಿದೆ. ಫೇಸ್ ಬುಕ್ ನಲ್ಲಿ ಪ್ರಕಟವಾಗುವ ಭಯೋತ್ಪಾದನೆಗೆ ಸಂಬಂಧಿಸಿದ ಅಂಶಳನ್ನು ತೆಗೆದುಹಾಕುವ ರೀತಿಯ ಕೃತಕ ಬುದ್ಧಿಮತ್ತೆಯನ್ನು ಬಳಕೆ ಮಾಡಲಾಗುತ್ತಿದೆ ಎಂದು ತಿಳಿಸಿದೆ. 
 
ಭಯೋತ್ಪಾದನೆ ತಡೆಗೆ ಫೇಸ್ ಬುಕ್ ಯಾವ ಕ್ರಮ ಕೈಗೊಂಡಿದೆ, ಅದರ ಪಾತ್ರವೇನು ಎಂದು ಸಾಮಾಜಿಕ ಜಾಲತಾಣದ ಬಳಕೆದಾರರು ಪ್ರಶ್ನಿಸಿರುವುದಕ್ಕೆ ಫೇಸ್ ಬುಕ್ ಈ ಸ್ಪಷ್ಟನೆ ನೀಡಿದೆ.
 
ಇಮೇಜ್-ಮ್ಯಾಚಿಂಗ್ ವಿಧಾನದ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದ ವಿಷಯಗಳನ್ನು ತೆಗೆದು ಹಾಕಲಿದೆ, ಬಳಕೆದಾರರು ಭಯೋತ್ಪಾದಕರ ಫೋಟೊ ಅಥವಾ ವಿಡಿಯೋಗಳನ್ನು ಪ್ರಚಾರ ಮಾಡಲು ಯತ್ನಿಸಿದರೆ ಅದು ಪ್ರಚಲಿತದಲ್ಲಿರುವ ಭಯೋತ್ಪಾದಕರ ಚಿತ್ರಗಳಿಗೆ ಹೋಲಿಕೆಯಾಗುತ್ತದೆಯೇ ಇಲ್ಲವೇ ಎಂಬುದನ್ನು ಪರಿಶೀಲಿಸುತ್ತದೆ, ಒಮ್ಮೆ ಉಗ್ರವಾದವನ್ನು ಪ್ರಚೋದಿಸುವ ವಿಡಿಯೋ ಫೋಟೊವನ್ನು ತೆಗೆದುಹಾಕಿದರೆ ಮುಂದೆ ಅದು ಪುನರಾವರ್ತನೆಯಾಗದಂತೆ ಎಚ್ಚರಿಕೆ ವಹಿಸಬಹುದು ಎಂದು ಫೇಸ್ ಬುಕ್ ಹೇಳಿದೆ.
 

ವೆಬ್ದುನಿಯಾವನ್ನು ಓದಿ