ಬ್ರಿಟಿಷ್ ಪಾರ್ಲಿಮೆಂಟ್ ಬಳಿ ಉಗ್ರರಿಂದ ಫೈರಿಂಗ್: ಇಬ್ಬರ ಸಾವು

ಬುಧವಾರ, 22 ಮಾರ್ಚ್ 2017 (20:48 IST)
ಬ್ರಿಟಿಷ್ ಪಾರ್ಲಿಮೆಂಟ್ ಬಳಿ ದುಷ್ಕರ್ಮಿಗಳು ನಡೆಸಿದ ಫೈರಿಂಗ್‌ನಲ್ಲಿ ಇಬ್ಬರು ಮೃತರಾಗಿದ್ದು 12ಕ್ಕೂ ಹೆಚ್ಚು ಜನ ಗಾಯಗೊಂಡ ಘಟನೆ ವರದಿಯಾಗಿದೆ.
 
ಸಂಸತ್ತಿನಲ್ಲಿ ಅಧಿವೇಶನ ನಡೆಯುತ್ತಿರುವಾಗಲೇ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುಂಡಿನ ದಾಳಿಯಿಂದಾಗಿ ಅಧಿವೇಶನವನ್ನು ಸ್ಥಗಿತಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
 
ದುಷ್ಕರ್ಮಿಗಳ ದಾಳಿಯಂದಾಗಿ ಲಂಡನ್‌ ನಗರಾದ್ಯಂತ ಹೈ ಅಲರ್ಟ್ ಘೋಷಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಸಂಸತ್ತಿನೊಳಗಡೆ 200 ಕ್ಕೂ ಹೆಚ್ಚು ಸಂಸದರು ಸಿಲುಕಿದ್ದು, ಭದ್ರತಾ ಪಡೆಗಳು ಸಂಪೂರ್ಣ ಸುರಕ್ಷಿತವಾಗಿದೆ ಎನ್ನುವ ಸೂಚನೆ ನೀಡುವವರೆಗೆ ಸಂಸತ್ತಿನಿಂದ ಹೊರಬರಲು ಸಂಸದರಿಗೆ ಅವಕಾಶ ನೀಡಲಾಗುತ್ತಿಲ್ಲ ಎನ್ನಲಾಗಿದೆ.
 
ಸಂಸತ್ತಿನ ಹೊರಗಡೆಯಿರುವ ಭದ್ರತಾ ಪಡೆಗಳು ಇದೊಂದು ಭಯೋತ್ಪಾದನೆ ಕೃತ್ಯ ಎಂದು ಭಾವಿಸಿದ್ದು, ಉಗ್ರರ ಶೋಧ ಕಾರ್ಯದಲ್ಲಿ ತೊಡಗಿದ್ದಾರೆ. ಉಗ್ರರನ್ನು ತಡೆಯಲು ಹೋದ ಪೊಲೀಸ್ ಅಧಿಕಾರಿಯೊಬ್ಬ ಗಾಯಗೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ