ಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು.. ನಿಮಗೆ ಸಿಗುತ್ತೆ ಬರೋಬ್ಬರಿ 11. 2 ಲಕ್ಷ ರೂ. ಹಣ

ಬುಧವಾರ, 5 ಏಪ್ರಿಲ್ 2017 (19:25 IST)
ನೀವು ಏನೂ ಕೆಲಸ ಮಾಡೋದು ಬೇಕಿಲ್ಲ. ಜಸ್ಟ್ ಹಾಸಿಗೆ ಮೇಲೆ ಮಲಗಿದ್ದರೆ ಸಾಕು. ನಿಮಗೆ ಸಿಗುತ್ತೆ ಬರೋಬ್ಬರಿ 11. 2 ಲಕ್ಷ ರೂ. ಹಣ. ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯೊಮದು ಇಂತಹ ಬಿಗ್ ಆಫರನ್ನ ನೀಡುತ್ತಿದೆ.

ಫ್ರಾನ್ಸ್`ನ ಸ್ಪೇಸ್ ಮೆಡಿಸಿನ್ ಮತ್ತು ಫಿಸಿಯಾಲಜಿ ಇನ್ಸ್`ಟಿಟ್ಯೂಟ್`ನ ಸಂಶೋಧಕರು ತಾವು ನಡೆಸುತ್ತಿರುವ ಮೈಕ್ರೋ ಗ್ರಾವಿಟಿ ಸಂಶೋಧನೆಗಾಗಿ 3 ತಿಂಗಳು ಹಾಸಿಗೆ ಮೇಲೆ ಮಲಗುವ ಸ್ವಯಂ ಇಚ್ಛೆಯಿಂದ ಬರುವವರಿಗಾಗಿ ಹುಡುಕಾಟ ನಡೆಸಿದ್ದಾರೆ. ಇದಕ್ಕಾಗಿ, 16,00 ಯೂರೋ(11.2 ಲಕ್ಷ ರೂ.) ಆಫರ್ ಕೊಟ್ಟಿದ್ದಾರೆ.

ಟೆಲಿಗ್ರಾಫ್ ವರದಿ ಪ್ರಕಾರ, ಬಾಹ್ಯಾಕಾಶದಲ್ಲಿ ಮಾನವ ದೇಹದ ತೂ ಕಳೆದುಕೊಂಡು ಹಗುರವಾಗುವ ಕುರಿತು ಸಂಶೋಧನೆಗೆ ವಿಜ್ಞಾನಿಗಳು ನಿರ್ಧರಿಸಿದ್ದಾರೆ.

ಈ ಕೆಲಸ ಬಯಸುವವರು 3 ಹಂತದಲ್ಲಿ 3 ತಿಂಗಳು ಅಧ್ಯಯನದಲ್ಲಿ ಕಳೆಯಬೇಕಿದೆ. ಮೊದಲೆರಡು ವಾರ ಗಂಭೀರ ಪರೀಕ್ಷೆಗಳು ಮತ್ತು ಮೆಶರ್`ಮೆಂಟ್ ನಡೆಯಲಿದೆ. ಮುಂದಿನ 60 ದಿನ ಸಂಪೂರ್ಣ ಹಾಸಿಗೆ ಮೇಲೆ ಮಲಗಿರಬೇಕು. ಕೊನೆಯ 2 ವಾರ ರಿಕವರಿ ಸಮಯವಿರುತ್ತದೆ. ಕೆಲಸ ಸರಳವಾಗಿ ಕಂಡರೂ ಕೆಲ ಕಠಿಣ ನಿಯಮಾವಳಿ ಇವೆಯಂತೆ.

ವೆಬ್ದುನಿಯಾವನ್ನು ಓದಿ