ಕಾರ್‌ಲ್ಲಿ ಬಂಧಿಯಾದ ನಾಯಿ ಹೊರಕ್ಕೆ ಬಿಡುವಂತೆ ಹಾರ್ನ್ ಮಾಡೋದನ್ನು ನೋಡಿ (ವಿಡಿಯೋ)

ಗುರುವಾರ, 28 ಜುಲೈ 2016 (08:59 IST)
ನಾಯಿ ಮಾನವನ ನಂಬಿಕಸ್ತ ಪ್ರಾಣಿ. ಅತ್ಯಂತ ಬುದ್ಧಿವಂತ ಪ್ರಾಣಿಗಳಲ್ಲಿ ಕೂಡ ಗುರುತಿಸಲ್ಪಡುತ್ತದೆ ಇದು. ಹಿಂದಿನ ಕಾಲದಿಂದ ಕುಟುಂಬದ ಸದಸ್ಯನಂತೆ ಬದುಕುತ್ತಿರುವ ನಾಯಿ ಈಗಂತೂ ಮತ್ತಷ್ಟು ಆಪ್ತವಾಗಿದೆ.  ಮನೆ ಒಳಗೆ ನಮ್ಮ ಜತೆಗೆ ಹಾಸಿಗೆಯ ಮೇಲೆ ಮಲಗುವಷ್ಟು ಸಲಿಗೆ ಬೆಳೆದಿದೆ. ಮುಂಜಾನೆ, ಸಂಜೆ ವಾಕಿಂಗ್ ಮಾಡುವಾಗಲೂ, ಕಾರಿನಲ್ಲಿ ಓಡಾಡುವಾಗಲೂ ನಾಯಿಯನ್ನು ಕರೆದುಕೊಂಡೆ ಓಡಾಡುತ್ತಾರೆ. ಹೀಗೆಯೇ ತನ್ನ ಮಾಲೀಕನ ಜತೆ ಕಾರಿನಲ್ಲಿ ಹೋದ ಬುದ್ಧಿವಂತ ನಾಯಿಯ ಕತೆ ಇದು...ಈ ವಿಡಿಯೋ ನೋಡಿ ನಕ್ಕು ನಿರಾಳರಾಗಿ....


ರಷ್ಯಾದ ಬ್ರ್ಯಾಯಾಂಕ್ಸ್ಲನಲ್ಲಿ ನಡೆದ ಘಟನೆ ಇದು. ಶಾಪಿಂಗ್ ಹೋಗಿದ್ದ ವ್ಯಕ್ತಿಯೊಬ್ಬ ತನ್ನ ಸಾಕುನಾಯಿಯನ್ನು  ಕಾರ್‌ನಲ್ಲಿಯೇ ಕೂಡಿ ಹಾಕಿ ಹೋಗಿದ್ದ. ಮಾಲೀಕನ ಬರುವಿಕೆಗಾಗಿ ಕಾಯುತ್ತ ಕುಳಿತ ನಾಯಿ ಆತ ಗಂಟೆಗಳಾದರೂ ಹಿಂತಿರುಗದಿದ್ದಾಗ ತಾಳ್ಮೆ ಕಳೆದುಕೊಂಡಿದೆ. ಮಾಲೀಕನನ್ನು ಕರೆಯಲು ಅದು ಮಾಡಿದ್ದೇನು ಗೊತ್ತೇ?  ಸ್ಟೇರಿಂಗ್ ಮೇಲೆ ಕಾಲಿಟ್ಟು ಹಾರ್ನ್ ಮಾಡಿದೆ.  ನಾಯಿ ಹಾರ್ನ್ ಮಾಡೋದನ್ನು ಗ್ಲಾಸ್ ಮೂಲಕ ನೋಡಿ ಕಾರ್ ಸುತ್ತುವರೆದ  ಕಾರಿನ ಬಳಿ ಹೋದಾಗ ನಾಯಿ ಹಾರ್ನ್ ಪುನರಾವರ್ತಿಸುತ್ತ ಹೊರಗೆ ಬಿಡುವಂತೆ ಕೇಳಿಕೊಂಡಿದೆ.

ಈ ವಿಡಿಯೋವೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಹರಿದಾಡುತ್ತಿದೆ.

ಕಾರ್‌ಲ್ಲಿ ಬಂಧಿಯಾದ ನಾಯಿ ಹೊರಕ್ಕೆ ಬಿಡುವಂತೆ ಹಾರ್ನ್ ಮಾಡೋದನ್ನು ನೋಡಿ (ವಿಡಿಯೋ)

ವೆಬ್ದುನಿಯಾವನ್ನು ಓದಿ