ಪ್ರಾಣದ ಹಂಗು ತೊರೆದು ಗೆಳತಿಯ ರಕ್ಷಣೆಗೆ ನಿಂತ ನಾಯಿ

ಗುರುವಾರ, 29 ಡಿಸೆಂಬರ್ 2016 (11:11 IST)
ರಸ್ತೆ ಅಪಘಾತದಿಂದ ಗಾಯಗೊಂಡು ಸಾಹಯಕ್ಕಾಗಿ ಕೂಗುತ್ತಿದ್ದರೂ ಮಾನವೀಯತೆಯನ್ನು ಮರೆತು ವರ್ತಿಸುವುದು ನಾಗರಿಕ ಸಮಾಜ ಎಂದು ಕರೆಸಿಕೊಳ್ಳುವ ನಮ್ಮ ನಡುವೆ ಸಾಮಾನ್ಯವಾಗಿ ಬಿಟ್ಟಿದೆ. ಆದರೆ ಪ್ರಾಣಿಗಳ ಜಗತ್ತಿನಲ್ಲಿರುವ ಸಹಾನುಭೂತಿಯ ಗುಣ ಮನುಷ್ಯರನ್ನೇ ತಲೆತಗ್ಗಿಸುವಂತೆ ಮಾಡುತ್ತವೆ. ಇದಕ್ಕೊಂದು ನಿದರ್ಶನ ಈ ಘಟನೆ. 
ಉಕ್ರೇನ್‌ನಲ್ಲಿ ನಡೆದ ನೈಜ ಘಟನೆ ಇದು. ಗಂಭೀರವಾಗಿ ಗಾಯಗೊಂಡ ನಾಯಿಯೊಂದು ರೈಲು ಹಳಿಯ ಮೇಲೆ ಬಿದ್ದಿತ್ತು. ಅಲ್ಲಿಂದ ಎದ್ದೇಳಲಾಗದ ಸ್ಥಿತಿಯಲ್ಲಿದ್ದ ತನ್ನ ಗೆಳತಿಯ ಅಸಹಾಯಕ ಸ್ಥಿತಿಯನ್ನು ಕಂಡ ಗಂಡುನಾಯಿ ಅದರ ಬಳಿ ಬಂದು ಕುಳಿತಿದೆ.
 
ಸಹಾಯಕ್ಕೆ ಬರುವವರೆಗೆ ಗಂಡು ನಾಯಿ ಹೆಣ್ಣುನಾಯಿಯನ್ನು ಬಿಟ್ಟು ಕದಲಲಿಲ್ಲ. ಎರಡು ದಿನಗಳ ಕಾಲ ಹಿಮಾವೃತವಾದ ಹಳಿಗಳ ಮೇಲೆಯೇ ಎರಡು ನಾಯಿಗಳಿದ್ದವು. ಆ ಹಳಿಗಳ ಮೇಲೆ ರೈಲುಗಳು ಸಹ ಓಡಾಡಿದ್ದವು. ಆದರೆ ಪ್ರಾಣದ ಹಂಗು ತೊರೆದು ಮೂಕ ಪ್ರಾಣಿ ಹೆಣ್ಣು ನಾಯಿಯ ಬಳಿ ಕುಳಿತಿತ್ತು. 
 
ಎರಡು ದಿನಗಳ ಬಳಿಕ ಅವೆರಡನ್ನು ಅಲ್ಲಿಂದ ಸಾಗಿಸಲಾಗಿದ್ದು, ಗಾಯಗೊಂಡ ನಾಯಿಗೆ ಚಿಕಿತ್ಸೆ ಕೊಡಿಸಲಾಗಿದೆ. ಇವೆರಡು ಒಂದೇ ಮನೆಗೆ ಸೇರಿದ ನಾಯಿಗಳಾಗಿದ್ದು ಲುಕಿ ಮತ್ತು ಪಾಂಡಾ ಹೆಸರಿನ ಇವು ಸದಾ ಒಟ್ಟಿಗೆ ಇರುತ್ತಿದ್ದವು ಮತ್ತು ಮರಳಿ ಈಗ ಮನೆಗೆ ಸೇರಿವೆ ಎಂದು ತಿಳಿದು ಬಂದಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ