ಆತ್ಮಹತ್ಯೆಗೆ ಯತ್ನಿಸಿದವಳನ್ನು ಸಿನಿಮೀಯ ಶೈಲಿಯಲ್ಲಿ ರಕ್ಷಿಸಿದ್ದನ್ನು ನೋಡಿ(ವಿಡಿಯೋ)

ಸೋಮವಾರ, 22 ಆಗಸ್ಟ್ 2016 (10:25 IST)
ರಸ್ತೆ ಬದಿಯಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಚಾಕು ಹಿಡಿದು ಬೆದರಿಕೆ ಹಾಕುತ್ತಿದ್ದ ಯುವತಿಯೊಬ್ಬಳನ್ನು ಆಪ್-ಡ್ಯೂಟಿಯಲ್ಲಿದ್ದ ಪೊಲೀಸ್ ಅಧಿಕಾರಿ ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಘಟನೆ ಚೀನಾ ಚೆಂಗ್ಡು ನಗರದಲ್ಲಿ ನಡೆದಿದೆ. 

ಘಟನೆಯ ವಿವರ: ಯವತಿಯೋರ್ವಳು ರಸ್ತೆ ಬದಿಯಲ್ಲಿ ನಿಂತು ಮಾಂಸ ಕತ್ತರಿಸುವ ಚಾಕುವನ್ನು ಹಿಡಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಬೆದರಿಕೆ ಹಾಕಿದ್ದಾಳೆ. ಅಲ್ಲೇ ಹತ್ತಿರದಲ್ಲಿ ಪೊಲೀಸರಿದ್ದರೂ ಆಕೆಯನ್ನು ತಡೆಯುವುದು ಹೇಗೆಂಬ ಗೊಂದಲದಲ್ಲಿದ್ದರು. ಆದರೆ ಕರ್ತವ್ಯ ಮನೆಗೆ ಹೋಗುತ್ತದ್ದ, ಸಿವಿಲ್ ಡ್ರೆಸ್‌ನಲ್ಲಿದ್ದ ಪೊಲೀಸ್ ಅಧಿಕಾರಿ ಹಿಂದುಗಡೆಯಿಂದ ಬಂದು ಸಿನಿಮೀಯ ರೀತಿಯಲ್ಲಿ ಆಕೆಯನ್ನು ರಕ್ಷಿಸಿದ್ದಾನೆ.
 
ಪ್ರತ್ಯಕ್ಷದರ್ಶಿಯೊಬ್ಬರು ಈ ವಿಡಿಯೋವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದಾರೆ. 
 
ಆತ್ಮಹತ್ಯೆಗೆ ಯತ್ನಿಸಿದವಳ ಸಿನಿಮೀಯ ರೀತಿಯಲ್ಲಿ ರಕ್ಷಣೆ(ವಿಡಿಯೋ)
 

ವೆಬ್ದುನಿಯಾವನ್ನು ಓದಿ