ತೈಲ ಬೆಲೆ ಏರಿಕೆಯಿಂದ ಭರ್ಜರಿ ಲಾಭ!?

ಗುರುವಾರ, 18 ಆಗಸ್ಟ್ 2022 (11:19 IST)
ರಿಯಾದ್ : ಉಕ್ರೇನ್ ರಷ್ಯಾ ಯುದ್ಧದಿಂದಾಗಿ ವಿಶ್ವದ ಅತಿ ದೊಡ್ಡ ತೈಲ ಉತ್ಪಾದನಾ ಕಂಪನಿ ಸೌದಿ ಅರಾಮ್ಕೋಗೆ ಭರ್ಜರಿ ಲಾಭವಾಗಿದೆ.
 
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿಕೆಯಿಂದಾಗಿ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಅರಾಮ್ಕೋ ಕಂಪನಿಯ ನಿವ್ವಳ ಆದಾಯ 48.4 ಶತಕೋಟಿ ಡಾಲರ್ಗೆ ಏರಿಕೆಯಾಗಿದೆ.
ಕಳೆದ ವರ್ಷ ಈ ಅವಧಿಯಲ್ಲಿ ಕಂಪನಿ ನಿವ್ವಳ ಆದಾಯ ಶೇ.25.5 ಶತಕೋಟಿ ಡಾಲರ್ ಇತ್ತು. ಈ ಬಾರಿ ಶೇ.90 ರಷ್ಟು ಏರಿಕೆಯಾಗಿ ಇತಿಹಾಸ ಸೃಷ್ಟಿಸಿದೆ.

ಷೇರು ಮಾರುಕಟ್ಟೆಯಲ್ಲಿ ಲಿಸ್ಟ್ ಮಾಡಿದ ಕಂಪನಿಗಳ ಪೈಕಿ ತ್ರೈಮಾಸಿಕದಲ್ಲಿ ಸೌದಿ ಅರಾಮ್ಕೋ ಅತಿ ಹೆಚ್ಚು ಲಾಭ ಮಾಡಿದ ಕಂಪನಿ ಎಂದು ಬ್ಲೂಮ್ಬರ್ಗ್ ಹೇಳಿದೆ. 

ಇಲ್ಲಿಯವರೆಗೆ ಪಾಶ್ಚಿಮಾತ್ಯ ದೇಶಗಳು ರಷ್ಯಾದಿಂದ ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದವು. ಆದರೆ ಉಕ್ರೇನ್ ಮೇಲಿನ ದಾಳಿಯಿಂದಾಗಿ ಈಗ ಸೌದಿಯಿಂದ ಭಾರೀ ಪ್ರಮಾಣದಲ್ಲಿ ತೈಲವನ್ನು ಆಮದು ಮಾಡಲು ಆರಂಭಿಸಿದೆ. ಕೋವಿಡ್ ಕಡಿಮೆಯಾದ ಬಳಿಕ ತೈಲ ಬೆಲೆ ನಿಧಾನವಾಗಿ ಏರಲು ಆರಂಭವಾಗಿತ್ತು. ಈ ಮಧ್ಯೆ ಯುದ್ಧದಿಂದಾಗಿ ಬೇಡಿಕೆ ಜಾಸ್ತಿಯಾಗಿ ತೈಲ ಬೆಲೆ ಗಗನಕ್ಕೆ ಏರಿತ್ತು.

ಒಪೆಕ್ ದೇಶಗಳ ಪೈಕಿ ಸೌದಿ ಅರೆಬಿಯಾ ಅತಿ ದೊಡ್ಡ ತೈಲ ಉತ್ಪಾದನಾ ದೇಶವಾಗಿದೆ. ವಿಶ್ವದ ಹಲವು ದೇಶಗಳು ಮನವಿಯ ಹಿನ್ನೆಲೆಯಲ್ಲಿ ಕಳೆದ ವಾರ ಒಪೆಕ್ ರಾಷ್ಟ್ರಗಳು ತೈಲ ಉತ್ಪಾದನೆಯನ್ನು ಹೆಚ್ಚಿಸಲು ಒಪ್ಪಿಗೆ ನೀಡಿವೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ