ಭಾರತದಲ್ಲಿ ಬದುಕುವಾಸೆ ಎಂದ ಐಎಸ್ಐ ಏಜೆಂಟ್! ಮುಂದೇನಾಯ್ತು ನೀವೇ ಓದಿ!

ಶನಿವಾರ, 29 ಏಪ್ರಿಲ್ 2017 (07:50 IST)
ನವದೆಹಲಿ: ದೆಹಲಿಯ ಇಂದಿರಾಗಾಂಧಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ವಿಚಿತ್ರ ಘಟನೆಯೊಂದು ನಡೆಯಿತು. ಪ್ರಯಾಣಿಕರೊಬ್ಬರು ತಾನು ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐ ಏಜೆಂಟ್ ಎಂದು ಅಧಿಕಾರಿಗಳ ಕೈವಶವಾಗಿದ್ದಾರೆ.

 
ದುಬೈನಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕ ನೇಪಾಳದ ಕಠ್ಮಂಡುವಿಗೆ ಟಿಕೆಟ್ ಬುಕ್ ಮಾಡಿದ್ದ. ಆದರೆ ನಂತರ ಮನಸ್ಸು ಬದಲಾಯಿಸಿ ನೇರ ವಿಮಾನ ನಿಲ್ದಾಣದ ಹೆಲ್ಪ್ ಡೆಸ್ಕ್ ಗೆ ತೆರಳಿ ಅಲ್ಲಿದ್ದ ಮಹಿಳಾ ಅಧಿಕಾರಿಗೆ ನಾನು ಐಎಸ್ಐ ಏಜೆಂಟ್. ಇನ್ನು ಅದರ ಸಹವಾಸ ಸಾಕೆನಿಸಿದೆ. ಭಾರತದಲ್ಲೇ ನೆಲೆಸಲು ಬಯಸುತ್ತೇನೆ ಎಂದಿದ್ದಾರೆ.

ಏಕಾ ಏಕಿ ಪ್ರಯಾಣಿಕರೊಬ್ಬರು ಈ ರೀತಿ ಹೇಳುತ್ತಿರುವುದನ್ನು ನೋಡಿ ಗಲಿಬಿಲಿಗೊಂಡ ಮಹಿಳಾ ಅಧಿಕಾರಿ, ಸಾವರಿಸಿಕೊಂಡು ತಕ್ಷಣ ವಿಮಾನ ನಿಲ್ದಾಣದ ಭದ್ರತಾ ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದ್ದಾಳೆ. ತಕ್ಷಣ ಅಧಿಕಾರಿಗಳು ಪ್ರಯಾಣಿಕನನ್ನು ವಿಚಾರಣೆಗೊಳಪಡಿಸಿದ್ದಾರೆ.

ಈತನ ಹೆಸರು ಮೊಹಮ್ಮದ್ ಅಹ್ಮದ್ ಶೇಕ್ ಮೊಹಮ್ಮದ್ ರಫೀಕ್ ಎಂದು ತಿಳಿದು ಬಂದಿದೆ. ಈತನ ಬಳಿ ಪಾಕ್ ಪಾಸ್ ಪೋರ್ಟ್ ಇತ್ತು. ಆದರೆ ಆತ ಹೇಳಿದಂತೆ ಐಎಸ್ಐ ಏಜೆಂಟ್ ಹೌದೋ, ಅಲ್ಲವೋ ಎಂದು ಭಾರತದ ಗುಪ್ತಚರ ಇಲಾಖೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ