ಡೋಕ್ಲಾಂ ವಿವಾದಿಂದ ಭಾರತ ತಕ್ಕ ಪಾಠ ಕಲಿತಿರಬಹುದು: ಚೀನಾ ಸೇನೆ

ಬುಧವಾರ, 30 ಆಗಸ್ಟ್ 2017 (08:34 IST)
ನವದೆಹಲಿ: ಡೋಕ್ಲಾಂನಲ್ಲಿ ಭಾರತ ಮತ್ತು ಚೀನಾ ಸೇನೆ ಹಿಂತೆಗೆದುಕೊಂಡು ಶಾಂತಿ ಪ್ರಕ್ರಿಯೆಗೆ ಚಾಲನೆ ನೀಡಿದ್ದರೆ, ಇನ್ನೊಂದೆಡೆ ಚೀನಾ ಸೇನೆ ವಿವಾದ ಕೆಣಕುವ ಪ್ರಯತ್ನ ನಡೆಸಿದೆ.

 
ಗಡಿಯಲ್ಲಿ ಭಾರತೀಯ ಸೈನಿಕರೊಂದಿಗೆ ತಗಾದೆ ತೆಗೆಯುತ್ತಿದ್ದ ಚೀನಾದ ಪೀಪಲ್ಸ್ ಲಿಬರೇಷನ್ ಸೈನ್ಯ ಡೋಕ್ಲಾಂ ವಿವಾದದ ಮೂಲಕ ಭಾರತ ನಮ್ಮಿಂದ ತಕ್ಕ ಪಾಠ ಕಲಿತಿರಬಹುದು ಎಂದಿದೆ.

‘ಡೋಕ್ಲಾಂ ಗಡಿಯಲ್ಲಿ ನಮ್ಮ ಯೋಧರು ಗಡಿ ಕಾಯುವ ಕೆಲಸ ಮುಂದುವರಿಸಲಿದ್ದಾರೆ. ಉಭಯ ದೇಶಗಳ ಗಡಿ ಭಾಗದ ಜನರ ದೃಷ್ಟಿಯಿಂದಲೂ ಇಲ್ಲಿನ ಉದ್ವಿಗ್ನ ಪರಿಸ್ಥಿತಿ ಕಳವಳಕಾರಿಯಾಗಿತ್ತು. ಸೇನೆ ಹಿಂತೆಗೆಯುವ ಮೂಲಕ ಭಾರತ ಎಲ್ಲಾ ರೀತಿಯಿಂದಲೂ ಪಾಠ ಕಲಿತಿರಬಹುದು’ ಎಂದು ಚೀನಾ ಲಿಬರೇಷನ್ ಸೇನೆಯ ಹಿರಿಯ ನಾಯಕ ವೂ ಕಿಯಾನ್ ಹೇಳಿದ್ದಾರೆ.

ಇದನ್ನೂ ಓದಿ.. ಸ್ಯಾಂಡಲ್ ವುಡ್ ನಲ್ಲಿ ಮಹಾಭಾರತವೇ ನಡೆಯಲಿದೆ!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ