18 ವರ್ಷಗಳ ನಂತರ ಭಾರತ-ಪಾಕ್ ಜಟಾಪಟಿ

ಸೋಮವಾರ, 15 ಮೇ 2017 (09:17 IST)
ನವದೆಹಲಿ: 18 ವರ್ಷಗಳ ನಂತರ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಕಾದಾಡಲಿವೆ. ಭಾರತೀಯ ನೌಕಾಪಡೆಯ ಅಧಿಕಾರಿಯಾಗಿದ್ದ ಕುಲಭೂಷಣ್ ಜಾದವ್ ಪ್ರಕರಣದಲ್ಲಿ ಇವೆರಡೂ ರಾಷ್ಟ್ರಗಳು ಮುಖಾಮುಖಿಯಾಗಲಿವೆ.

 
18 ವರ್ಷಗಳ ಹಿಂದೆ ಪಾಕಿಸ್ತಾನ ತನ್ನ ನೌಕಾ ಪಡೆಯ ವಿಮಾನವನ್ನು ಹೊಡೆದುರುಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಸಂಸ್ಥೆಯ ಅಂಗವಾದ ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ವಿರುದ್ಧ ದೂರು ಸಲ್ಲಿಸಿತ್ತು.

ಅದರ ನಂತರ ಇದೇ ಮೊದಲ ಬಾರಿಗೆ ಉಭಯ ದೇಶಗಳು ನ್ಯಾಯಾಲಯದಲ್ಲಿ ತಮ್ಮ ವಾದ ಮಂಡಿಸಲಿವೆ. ಇಂದಿನಿಂದ ವಿಚಾರಣೆ ಆರಂಭವಾಗಲಿದೆ. ನೆದರ್ಲ್ಯಾಂಡ್ಸ್ ನಲ್ಲಿ ನ್ಯಾಯಾಲಯವಿದ್ದು, ಉಭಯ ದೇಶಗಳ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.

ಕುಲಭೂಷಣ್ ಜಾದವ್ ಗೆ ವಿನಾಕಾರಣ ಗುಪ್ತಚರನೆಂಬ ಹಣೆ ಪಟ್ಟಿ ಕಟ್ಟಿ ಪಾಕ್ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಭಾರತ ಆರೋಪಿಸಿದೆ. ಪಾಕಿಸ್ತಾನ ಈ ವಿಚಾರದಲ್ಲಿ ವಿಯೆನ್ನಾ ಒಪ್ಪಂದ ಮುರಿದಿದೆ ಎಂದು ಭಾರತ ದೂರಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

ವೆಬ್ದುನಿಯಾವನ್ನು ಓದಿ