India Pakistan: ಭಾರತಕ್ಕೆ ಪಾಕಿಸ್ತಾನ ಅಟ್ಯಾಚ್ಡ್ ಟಾಯ್ಲೆಟ್, ಹಿಗ್ಗಾಮುಗ್ಗಾ ಟ್ರೋಲ್
ಪಹಲ್ಗಾಮ್ ನಲ್ಲಿ ಉಗ್ರ ದಾಳಿಗೆ ಪ್ರತೀಕಾರವಾಗಿ ಭಾರತ ಆಪರೇಷನ್ ಸಿಂಧೂರ್ ಮೂಲಕ ಉಗ್ರರ ಅಡಗುದಾಣಗಳನ್ನು ಉಡೀಸ್ ಮಾಡಿತ್ತು. ಇದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ದಾಳಿ ನಡೆಸಲು ಮುಂದಾಗಿತ್ತು. ಇದನ್ನು ಭಾರತೀಯ ಪಡೆಗಳು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ.
ಇದರ ಬೆನ್ನಲ್ಲೇ ಸೋಷಿಯಲ್ ಮೀಡಿಯಾದಲ್ಲಿ ಪಾಕಿಸ್ತಾನ ಸಾಕಷ್ಟು ಟ್ರೋಲ್ ಆಗುತ್ತಿದೆ. ಭಾರತದ ಭೂಪಟದ ಜೊತೆಗೆ ಪಕ್ಕದ ಎರಡು ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಚಿತ್ರಿಸಿ ಭಾರತವೆಂಬ ಮಾಸ್ಟರ್ ಬೆಡ್ ರೂಂಗೆ ಎರಡು ಅಟ್ಯಾಚ್ಡ್ ಟಾಯ್ಲೆಟ್ ಎಂದು ಪಾಕಿಸ್ತಾನವನ್ನು ಟ್ರೋಲ್ ಮಾಡಲಾಗಿದೆ. ಇನ್ನು ಕೆಲವರು ಪಾಕಿಸ್ತಾನದ ಮ್ಯಾಪ್ ನ್ನು ಕುಳಿತಿರುವ ನಾಯಿಗೆ ಹೋಲಿಸಿ ಆಕ್ರೋಶ ಹೊರಹಾಕಿದ್ದಾರೆ.