ಸುಳ್ಳು ಆರೋಪ ಹೊರಿಸಿ ಭಾರತೀಯನನ್ನ ಗಲ್ಲು ಶಿಕ್ಷೆ ವಿಧಿಸಿದ ಪಾಕಿಸ್ತಾನ

ಸೋಮವಾರ, 10 ಏಪ್ರಿಲ್ 2017 (15:58 IST)
ಬೇಹುಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಪಾಕಿಸ್ತಾನದ ಮಿಲಿಟರಿ ಕೋರ್ಟ್ ಭಾರತ ಮೂಲಕ ಕುಲ್ ಭೂಷಣ್ ಜಾಧವ್`ಗೆ ಗಲ್ಲುಶಿಕ್ಷೆ ವಿಧಿಸಿದೆ. ಪಾಕಿಸ್ತಾನದ ಸೇನಾ ಕಾಯ್ದೆಯಡಿ ಶಿಕ್ಷೆ ವಿಧಿಸಲಾಗಿದ್ದು, ಮುಖ್ಯ ಸೇನಾಧಿಕಾರಿ ಜನರಲ್ ಖಮಾರ್ ಜಾವೇದ್ ಬಜ್ವಾ ಈ ವಿಷಯವನ್ನ ಖಚಿತಪಡಿಸಿದ್ದಾರೆ ಎಂದು ಡಾನ್ ನ್ಯೂಸ್ ವರದಿ ಮಾಡಿದೆ.

ಕುಲ್ ಭೂಷಣ್ ಜಾಧವ್ ಅವರನ್ನ ಇರಾನಿನಲ್ಲಿ ಕಿಡ್ನಾಪ್ ಮಾಡಿದ ಪಾಕಿಸ್ತಾನ ಸೇನೆ ಬಳಿಕ ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಹೇಳಿಕೊಂಡಿತ್ತು. ಜಾಧವ್ ವಿರುದ್ಧದ ಆರೋಪಕ್ಕೆ ಯಾವುದೇ ಸಾಕ್ಷ್ಯಗಳಿರಲಿಲ್ಲ.  ಪಾಪಿ ಪಾಕಿಸ್ತಾನ ತನಿಖೆ ಕುರಿತಂತೆ ಭಾರತ ಸರ್ಕಾರಕ್ಕೆ ಯಾವುದೇ ಮಾಹಿತಿ ನೀಡಿಲ್ಲ. ಇದು ಪಾಕಿಸ್ತಾನ ಸೇನೆಯ ಆಂತರಿಕ ನಿರ್ಧಾರ ಎನ್ನಲಾಗಿದೆ.

ತಿಂಗಳ ಹಿಂದಷ್ಟೇ ಪಾಕಿಸ್ತಾನ ಸೇನೆ ಜಾಧವ್ ತಪ್ಪೊಪ್ಪಿಗೆ ವಿಡಿಯೋ ರಿಲೀಸ್ ಮಾಡಿತ್ತು. ಈ ವಿಡಿಯೋದಲ್ಲಿ ಜಾಧವ್, ತಾನು ಭಾರತೀಯ ನೌಕಾದಳದ ಅಧಿಕಾರಿ ಎಂದು ಹೇಳಿಕೊಂಡಿದ್ದರೆಂದು ವರದಿಯಾಗಿದೆ. ಇವತ್ತು ಜಾಧವ್ ಅವರನ್ನ ನೇಣಿಗೇರಿಸಲಾಗಿದ್ದು,ಪಾಕಿಸ್ತಾನದ ವಿರುದ್ಧ ಜಾಧವ್ ಬೇಹುಗಾರಿಕೆ ಮತ್ತು ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದನೆಂದು ಹೇಳಿಕೊಂಡಿದೆ. ಆದರೆ, ಪಾಕಿಸ್ತಾನದ ಆರೋಪಗಳನ್ನ ಭಾರತ ನಿರಾಕರಿಸಿದೆ.

ವೆಬ್ದುನಿಯಾವನ್ನು ಓದಿ