ಅಜ್ಞಾತ ವಾಸದಿಂದ ಹೊರಬಂದ ಇರಾನ್‌ನ ಸರ್ವೋಚ್ಚ ನಾಯಕ: ಜನರತ್ತ ಕೈಬೀಸಿದ ಅಯಾತೊಲ್ಲಾ ಅಲಿ

Sampriya

ಭಾನುವಾರ, 6 ಜುಲೈ 2025 (12:20 IST)
Photo Credit X
ಟೆಹರಾನ್: ಇರಾನ್‌ನ ಸರ್ವೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಅವರು ಇಸ್ರೇಲ್‌ ವಿರುದ್ಧದ ಯುದ್ಧದ ಬಳಿಕ ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

12 ದಿನಗಳ ಕಾಲ ‌ಇಸ್ರೇಲ್ ಹಾಗೂ ಇರಾನ್ ನಡುವಣ ಯುದ್ಧ ನಡೆದಿತ್ತು. ಈ ಮಧ್ಯೆ ಇರಾನ್‌ನ ಮೂರು ಪರಮಾಣು ಘಟಕಗಳನ್ನು ಗುರಿಯಾಗಿಸಿ ಅಮೆರಿಕದ ಸೇನಾ ಪಡೆಯು ಬಾಂಬ್ ದಾಳಿ ನಡೆಸಿತ್ತು. ಯುದ್ಧದ ಸಂದರ್ಭದಲ್ಲಿ ಇರಾನ್‌ನ ಪರಮೋಚ್ಛ ನಾಯಕರು ಬಂಕರ್‌ನಲ್ಲಿ ಅಜ್ಞಾತ ವಾಸದಲ್ಲಿದ್ದರು ಎನ್ನಲಾಗಿದೆ.

ಅಶುರಾ ಹಬ್ಬದ ಮುನ್ನಾದಿನದಂದು ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಖಮೇನಿ ಭಾಗವಹಿಸಿದ್ದಾರೆ. ಈ ಸಮಾರಂಭವು 7ನೇ ಶಮಾತನದ ಪ್ರವಾದಿ ಮುಹಮ್ಮದ್ ಹುಸೇನ್ ಅವರ ಮೊಮ್ಮಗ ಹುಸೇನ್ ಹುತಾತ್ಮರಾಗಿದ್ದ ಸ್ಮರಣಾರ್ಥವಾಗಿ ಏರ್ಪಡಿಸಲಾಗಿತ್ತು.

ಇರಾನ್‌ನ ರಾಜಧಾನಿ ಟೆಹರಾನ್‌ನಲ್ಲಿರುವ ತಮ್ಮ ಕಚೇರಿ ಹಾಗೂ ನಿವಾಸದ ಸಮೀಪದಲ್ಲಿರುವ ಮಸೀದಿಗೆ ಆಗಮಿಸಿರುವ ಖಮೇನಿ ಜನಸಮೂಹದತ್ತ ಕೈಬೀಸಿದ್ದಾರೆ. ಈ ವೇಳೆ ನೆರೆದಿದ್ದವರು ಜಯುಘೋಷವನ್ನು ಕೂಗಿದ್ದಾರೆ. ಭಾರಿ ಭದ್ರತೆಯಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ