ಟೊಕಿಯೊ : ಚೀನಾ ವಿರುದ್ಧ ಪ್ರತಿದಾಳಿ ನಡೆಸಲು ಜಪಾನ್ ಮುಂದಾಗಿದ್ದು, ಅತ್ಯಂತ ಶಕ್ತಿಶಾಲಿ ಹಾಗೂ ದೀರ್ಘ ಶ್ರೇಣಿಯ 1,000 ಕ್ರೂಸ್ ಮಿಸೈಲ್ಗಳನ್ನು ತನ್ನ ನೌಕಾಪಡೆಗೆ ನಿಯೋಜಿಸಲು ಜಪಾನ್ ಸಿದ್ಧವಾಗಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಈ ಕ್ಷಿಪಣಿಗಳು 100 ಕಿ.ಮೀ ನಿಂದ ಬರೋಬ್ಬರಿ 1,000 ಕಿಮೀ ವರೆಗೆ ಗುರಿ ತಲುಪುವ ಸಾಮರ್ಥ್ಯವನ್ನು ಒಳಗೊಂಡಿವೆ. ಕ್ಷಿಪಣಿಗಳನ್ನು ಉತ್ತರ ಕೊರಿಯಾ ಮತ್ತು ಚೀನಾಕ್ಕೆ ಸಮೀಪವಿರುವ ನ್ಯಾನ್ಸಿ ದ್ವೀಪಗಳಲ್ಲಿ ನಿಯೋಜಿಸಲು ಜಪಾನ್ ಮುಂದಾಗಿದೆ ಎಂದು ವರದಿ ಹೇಳಿದೆ.
ಈಗಾಗಲೇ ಅಸ್ತಿತ್ವದಲ್ಲಿರುವ ಹಡಗುಗಳಿಗೆ ಹಾಗೂ ಯುದ್ಧ ವಿಮಾನಗಳಿಗೆ ಕ್ರೂಸ್ ಮಿಸೈಲ್ಗಳನ್ನು ಅಳವಡಿಸುವ ವ್ಯವಸ್ಥೆಯನ್ನು ಉನ್ನತೀಕರಿಸಲಾಗಿದೆ.
ಈ ಬಹುತೇಕ ಕ್ಷಿಪಣಿಗಳನ್ನು ನೈರುತ್ಯ ವಲಯದಲ್ಲಿ ತೈವಾನ್ ಬಳಿ ನಿಯೋಜಿಸಲು ಜಪಾನ್ ಮುಂದಾಗಿದೆ.