ಬುಲೆಟ್ ರೈಲನ್ನೇ ತಡೆದು ನಿಲ್ಲಿಸಿದ ಹಾವು

ಬುಧವಾರ, 28 ಸೆಪ್ಟಂಬರ್ 2016 (07:52 IST)
ಅತ್ಯಂತ ವೇಗದಿಂದ ಚಲಿಸುವ ಜಪಾನ್‌ನ ಬುಲೆಟ್ ರೈಲನ್ನು ಹಾವೊಂದು ತುರ್ತಾಗಿ ನಿಲ್ಲಿಸುವಂತೆ ಮಾಡಿದೆ. 

ಹೌದು, ಟೋಕಿಯೋ- ಹಿರೋಶಿಮಾ ನಡುವೆ ಚಲಿಸುತ್ತಿದ್ದ ರೈಲಿನಲ್ಲಿ ಸೋಮವಾರ ಹಾವೊಂದು ಕಾಣಿಸಿಕೊಂಡು ಆತಂಕಕ್ಕೆ ಕಾರಣವಾಯ್ತು.ತನ್ನ ಮುಂದಿದ್ದ ಸೀಟ್‌ಗಳ ಸಂದಿಯಲ್ಲಿ ಕಂದು ಹಾವೊಂದನ್ನು ಕಂಡ ಮಹಿಳಾ ಪ್ರಯಾಣಿಕಳೋರ್ವಳು ಈ ಕುರಿತು ಅಧಿಕಾರಿಗಳ ಗಮನಕ್ಕೆ ತಂದಿದ್ದಾಳೆ. ತಕ್ಷಣ ಉರಗ ತಜ್ಞರನ್ನು ಕರೆಸಿ 30 ಸೆಂ, ಮೀ ಉದ್ದದ ಹಾವನ್ನು ಸೆರೆ ಹಿಡಿಯಲಾಯಿತು.
 
ಹಾವು ರೈಲಿನೊಳಗೆ ಹೇಗೆ ಬಂತು ಎಂಬುದು ಅರ್ಥವಾಗುತ್ತಿಲ್ಲ. ಇದು ಕಾಡಿನಿಂದ ಬಂದಿದ್ದೋ ಅಥವಾ ಸಾಕಿದ್ದೋ ಎಂದು ತಿಳಿಯುತ್ತಿಲ್ಲ ಎಂದು ಜಪಾನ್ ಕೇಂದ್ರ ರೈಲು ವಕ್ತಾರ್ ಟೊಮಿಕುಬೋ ಪ್ರತಿಕ್ರಿಯಿಸಿದ್ದಾರೆ. 
 
ಜಪಾನ್‌ನ ಬುಲೆಟ್ ರೈಲು ಸಮಯಕ್ಕೆ ಸರಿಯಾಗಿ ತಲುಪುವುದಕ್ಕೆ ಹೆಸರುವಾಸಿ. ಹಾವಿನ ಕಾರಣಕ್ಕೆ ರೈಲು ಕೆಲ ಕಾಲ ನಿಂತರೂ ನಿಗದಿತ ಸಮಯಕ್ಕೆ ಹಿರೋಶಿಮಾಕ್ಕೆ ತಲುಪಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ವೆಬ್ದುನಿಯಾವನ್ನು ಓದಿ