ಉಕ್ರೇನ್‍ಗೆ ದೇಣಿಗೆ ನೀಡಿದ ಜಪಾನ್ ಉದ್ಯಮಿ

ಸೋಮವಾರ, 28 ಫೆಬ್ರವರಿ 2022 (10:35 IST)
ಟೋಕಿಯೋ : 5ನೇ ದಿನವೂ ಸತತವಾಗಿ ರಷ್ಯಾ ಸೈನಿಕರು ಉಕ್ರೇನ್ ಮೇಲೆ ದಾಳಿ ಮುಂದುವರಿಸಿದ್ದಾರೆ.

ಸಂಕಷ್ಟದಲ್ಲಿ ಸಿಲುಕಿರವ ಉಕ್ರೇನ್ಗೆ  ಜಪಾನ್ ಉದ್ಯಮಿ 65 ಕೋಟಿ ಕೊಡುವುದಾಗಿ ಘೋಷಿಸಿದ್ದಾರೆ. ಹಿಂಸಾಚಾರಕ್ಕೆ ಬಲಿಯಾದ ಉಕ್ರೇನ್ ಜನರಿಗೆ ಸಹಾಯ ಮಾಡಲು  1 ಬಿಲಿಯನ್ (8.7 ಮಿಲಿಯನ್ ಅಮೇರಿಕನ್ ಡಾಲರ್) ಹಣವನ್ನು ದೇಣಿಗೆ ನೀಡಿ, ಉಕ್ರೇನ್ ಅಧ್ಯಕ್ಷ ವ್ಲಾಡಿಮಿರ್ ಝೆಲನ್ಸ್ಕಿ ಅವರಿಗೆ ಉದ್ಯಮಿ ಹಿರೋಚಿ ಮಿಕಿತಾನಿ  ಅವರು ಪತ್ರ ಬರೆದಿದ್ದಾರೆ.

ಮಿಕಿತಾನಿ ಅವರು 2019ರಲ್ಲಿ ಕೈವ್ಗೆ ಭೇಟಿ ನೀಡಿದಾ ಝೆಲೆನ್ಸ್ಕಿಯನ್ನು ಭೇಟಿಯಾಗಿದ್ದರು. ನನ್ನ ಆಲೋಚನೆಗಳು ನಿಮ್ಮೊಂದಿಗೆ ಮತ್ತು ಉಕ್ರೇನ್ ಜನರೊಂದಿಗೆ ಇವೆ ಎಂದು ಮಿಕಿತಾನಿ ತನ್ನ ಪತ್ರದಲ್ಲಿ ತಿಳಿಸಿದ್ದಾರೆ.

ಉಕ್ರೇನ್ನ ಮೇಲೆ ರಷ್ಯಾ ದೇಶ ಮಾಡಿರುವ ಆಕ್ರಮಣವನ್ನು ವಿಶ್ವದ ಪ್ರಮುಖ ದೇಶಗಳು ಖಂಡಿಸಿವೆ. ಇದರ ಬೆನ್ನಲ್ಲಿಯೇ ರಷ್ಯಾವನ್ನು ವಿಶ್ವದಲ್ಲಿ ಏಕಾಂಗಿಯಾಗಿರುವ ಪ್ರಕ್ರಿಯೆಗಳೂ ನಡೆದಿದ್ದು, ಎಲ್ಲಾ ರೀತಿಯ ಆರ್ಥಿಕ ದಿಗ್ಭಂದನಗಳನ್ನು ರಷ್ಯಾದ ಮೇಲೆ ಹೇರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ