ಪತ್ರಕರ್ತರ ವೀಸಾ ವಿವಾದ: ಚೀನಾದಿಂದ ಭಾರತಕ್ಕೆ ಗಂಭೀರ ಎಚ್ಚರಿಕೆ

ಸೋಮವಾರ, 25 ಜುಲೈ 2016 (18:40 IST)
ಚೀನಾದ ಪತ್ರಕರ್ತರ ವೀಸಾ ವಿಸ್ತರಿಸಲು ನಿರಾಕರಿಸಿರುವ ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಸರಕಾರಿ ಸಂಚಾಲಿತ ಪತ್ರಿಕೆಯೊಂದು ಎಚ್ಚರಿಸಿದೆ.  
 
ಎನ್‌ಎಸ್‌ಜಿ ಸದಸ್ಯತ್ವ ಪಡೆಯಲು ಚೀನಾ ಅಡ್ಡಿಯಾಗಿದ್ದರಿಂದ ಭಾರತ ಸೇಡು ತೀರಿಸಿಕೊಳ್ಳಲು ಬಯಸುತ್ತಿದೆ ಎನ್ನುವ ವರದಿಗಳು ಹರಿದಾಡುತ್ತಿವೆ. ಒಂದು ವೇಳೆ, ವರದಿ ನಿಜವಾಗಿದ್ದಲ್ಲಿ ಭಾರತ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.  
 
ಝಿನ್‌ಹುವ್ ಮಾಧ್ಯಮ ಸಂಸ್ಥೆಯೊಂದರ ಮೂವರು ವರದಿಗಾರರ ವೀಸಾ ವಿಸ್ತರಿಸಲು ಭಾರತ ಸರಕಾರ ನಿರಾಕರಿಸಿದೆ.
 
ಚೀನಾ ಪತ್ರಕರ್ತರ ವೀಸಾ ಅವಧಿ ವಿಸ್ತರಿಸಲು ತಿರಸ್ಕರಿಸಿದ್ದಕ್ಕೆ ಕೇಂದ್ರ ಸರಕಾರ ಯಾವುದೇ ಕಾರಣಗಳು ನೀಡಿಲ್ಲ. ಆದರೆ, ಪತ್ರಕರ್ತರು ಉಚ್ಚಾಟಿತ ಟಿಬೆಟ್ ನಾಯಕರ ಭೇಟಿ ಮಾಡಿರುವುದು ಸೇರಿದಂತೆ ಹಲವು ಕಾನೂನುಬಾಹಿರ ಕೃತ್ಯಗಳಲ್ಲಿ ತೊಡಗಿದ್ದರು ಎಂದು ಮೂಲಗಳು ತಿಳಿಸಿವೆ.
 
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ