ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ : ನಾಸಾ

ಬುಧವಾರ, 19 ಏಪ್ರಿಲ್ 2017 (19:35 IST)
ಇಂದು ಭೂಮಿಗೆ ಹತ್ತಿರದಿಂದ ಹಾದು ಹೋಗಲಿರುವ ದೊಡ್ಡ ಕ್ಷುದ್ರಗ್ರಹ, ಚಂದ್ರನ ಎರಡರಷ್ಟು ಪ್ರತಿಬಿಂಬದಂತೆ ಅಂದಾಜು ಕಾಣುವಂತಿದ್ದು ಒಂದರಷ್ಟು ಮತ್ತು ಒಂದು ಮೈಲಿ ಮುಕ್ಕಾಲು ಅಂದರೆ 600 ಕಿ.ಮೀ ಗಳಿಂದ 1400 ಮೀಟರ್‌ಗಳವರೆಗೆ ಅಗಲವಾಗಿದ್ದರೂ ಬರಿಗಣ್ಣಿಗೆ ಕಾಣಿಸುವುದಿಲ್ಲ ಎಂದು ನಾಸಾ ವಿಜ್ಞಾನಿಗಳು ಹೇಳಿದ್ದಾರೆ.
 400 ಮೀಟರ್‌ಗಳಷ್ಟು ಅಗಲವಾಗಿರುವ ಕ್ಷುದ್ರಗ್ರಹ ಇಂದು ಭೂಮಿಗೆ ತೀರಾ ಹತ್ತಿರದಿಂದ ಹಾದು ಹೋಗಲಿದೆ. ಭೂಮಿಯಿಂದ 1.8 ಮಿಲಿಯನ್ ಕಿ.ಮೀ ಎತ್ತರದಲ್ಲಿ ಹಾದುಹೋಗಲಿದ್ದರೂ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ತಿಳಿಸಿದ್ದಾರೆ.
 
ಸಣ್ಣ ಸಣ್ಣ ಕ್ಷುದ್ರಗ್ರಹಗಳು ನಿರಂತರವಾಗಿ ಭೂಮಿಗೆ ಹತ್ತಿರವಾಗಿ ಹಾದುಹೋಗುತ್ತಿರುತ್ತವೆ.ಆದರೆ, ಕಳೆದ 2014ರ ಮೇ ತಿಂಗಳಲ್ಲಿ ಬೃಹತ್ ಕ್ಷುದ್ರಗ್ರಹ 1.8 ಮಿಲಿಯನ್ ಕಿ.ಮೀ ಎತ್ತರದಲ್ಲಿ ಭೂಮಿಗೆ ಹತ್ತಿರದಿಂದ ಹೋಗಿರುವುದು ಪತ್ತೆಯಾಗಿತ್ತು. 
 
ಭೂಮಿಯ ಹತ್ತಿರದಿಂದ ಹಾದುಹೋಗಲಿರುವ ಕ್ಷುದ್ರಗ್ರಹ ಕೆಲವೇ ಸೆಕೆಂಡ್‌ಗಳಲ್ಲಿ ಭೂಮಿಯಿಂದ ಮರೆಯಾಗುತ್ತದೆ ಎಂದು ನಾಸಾದ ಗಣಿತ ತಜ್ಞರಾದ ದವಿಡೆ ಫರ್ನೋಶಿಯಾ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ