ಹ್ಹಹ್ಹಹ್ಹ.. ಆಮೆ ಬಳಿ ಲಿಫ್ಟ್ ಕೇಳಿದ ಕಪ್ಪೆ...ಮುಂದೇನಾಯ್ತು?

ಮಂಗಳವಾರ, 5 ಜುಲೈ 2016 (12:05 IST)
ಕೆಲವೊಮ್ಮೆ ಪ್ರಾಣಿ ತರಹ ಆಡಬೇಡ ಎಂದು ಗದರುತ್ತೇವೆ. ಆದರೆ ನಾವು ಪ್ರಾಣಿಗಳಿಂದ ಕಲಿಯುವುದು ಬಹಳಷ್ಟಿದೆ. ಪ್ರಾಣಿ ಪ್ರಪಂಚ ಕುತೂಹಲಗಳ ಆಗರ. ನಮ್ಮ ಹಾಗೆ ಜೀವವಿರುವ ಪ್ರಾಣಿಗಳಲ್ಲಿ ಭಾವನೆ, ಪ್ರೀತಿ, ಶಿಸ್ತು, ಸಂತೋಷ, ದಯೆ, ದುಃಖ, ಸೋಮಾರಿತನ, ಸಹಬಾಳ್ವೆಯ ಇತ್ಯಾದಿ ಗುಣಗಳಿರುತ್ತವೆ. ಇಲ್ಲೊಂದು ಕಪ್ಪೆಯ ಕಥೆಯಿದೆ. ಸೋಮಾರಿ ಕಪ್ಪೆ ಆಮೆ ಜತೆ ಲಿಫ್ಟ್ ಕೇಳಿದ ವಿಚಿತ್ರ ಸತ್ಯಕಥೆ ಇದು.

ಇಂಡೋನೇಷ್ಯಾದ ಜಕಾರ್ತಾ ಬಳಿಯ ಟ್ಯಾಂಗ್​ರಂಗ್ ಎಂಬ ಪುಟ್ಟನಗರದಲ್ಲಿ ಸೆರೆಸಿಕ್ಕ ಫೋಟೋವಿದು. ಹವ್ಯಾಸಿ ಛಾಯಾಗ್ರಾಹಕರಾಗಿರುವ ಸುಹೆರ್​ವುನ್ ಬುಂಟೊರೊ ಎಂಬಾತ ತನ್ನ ಮನೆಯ ಉದ್ಯಾನವನದಲ್ಲಿ ಕಂಡ ಈ ಅಪರೂಪದ ದೃಶ್ಯವನ್ನು ಕ್ಯಾಮರಾ ಕಣ್ಣಲ್ಲಿ ಸೆರೆ ಹಿಡಿದಿದ್ದಾನೆ. ಈ ಚಿತ್ರ ನೋಡಿ ಕಪ್ಪೆ- ಆಮೆಯ ಲಿಫ್ಟ್ ಪುರಾಣವನ್ನು ಬಿಚ್ಚಿಡುತ್ತದೆ. 
 
ಆ ಕಪ್ಪೆಗೆ ಎಲ್ಲಿಗೆ ಹೋಗಬೇಕಿತ್ತೋ ಗೊತ್ತಿಲ್ಲ. ಗೊಡ್ಡು ಸೋಮಾರಿ ಇರಬೇಕದು. ಆಮೆ ಬಳಿ ಬಂದು ಲಿಫ್ಟ್ ಕೇಳಿದೆ. ತನ್ನ ಮೇಲೇರ ತೊಡಗಿದ್ದ ಕಪ್ಪೆಯನ್ನು ಆಮೆ ದೂರ ತಳ್ಳಿಲ್ಲ. ಸುಮ್ಮನೆ ಸಹಕಾರ ನೀಡಿದೆ. ಖುಷಿಯಿಂದ ಕಪ್ಪೆ ಆಮೆಯ ಬೆನ್ನೇರಿ ಕುಳಿತು ಸವಾರಿ ಆರಂಭಿಸಿದೆ. ಮುಂದೆ ನಡೆದಿರುವುದು ಮತ್ತೂ ವಿಶೇಷ. ಸ್ವಲ್ಪ ದೂರ ಸಾಗಿದ ಮೇಲೆ ಆಮೆಯ ನಿಧಾನಗತಿಯ ವೇಗ ಕಪ್ಪೆಗೆ ಬೇಸರ ತರಿಸಿದೆ. ಇದ್ಯಾಕೋ ಸರಿ ಬರಲ್ಲ ಎಂದುಕೊಂಡ ಕಪ್ಪೆ ಆಮೆಯ ಬೆನ್ನ ಮೇಲಿಂದ ಇಳಿದು ಆಮೆಯನ್ನು ತಳ್ಳುತ್ತಿರುವ ಫೋಟೋ ಕೂಡಾ ಬುಂಟೊರೊ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಎರಡು ಚಿತ್ರಗಳೀಗ ಆನ್​ಲೈನ್​ನಲ್ಲಿ ವೈರಲ್ ಆಗಿ ಹರಿದಾಡುತ್ತಿದ್ದು ಕುತೂಹಲಕ್ಕೆ ಕಾರಣವಾಗಿವೆ.
 
 
 
 
 

ವೆಬ್ದುನಿಯಾವನ್ನು ಓದಿ