ಆದಷ್ಟು ಬೇಗ ಹೊರಗೆ ಹೋಗಿ: ಬ್ರಿಟನ್‌ಗೆ ಯುರೋಪ್ ಒಕ್ಕೂಟ ಸಲಹೆ

ಶುಕ್ರವಾರ, 24 ಜೂನ್ 2016 (21:34 IST)
ಬ್ರಿಟನ್ ಪ್ರಧಾನಿ ಡೇವಿಡ್ ಕ್ಯಾಮರೂನ್ ಮೂರು ತಿಂಗಳಲ್ಲಿ ಪ್ರಧಾನಿ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಹೇಳಿಕೆ ನೀಡಿದ ನಂತರ ಆದಷ್ಟು ಬೇಗ ಯುರೋಪ್ ಒಕ್ಕೂಟ ತೊರೆಯಬೇಕು ಎಂದು ಯುರೋಪ್ ಮುಖ್ಯಸ್ಥರು ಒತ್ತಾಯಿಸಿದ್ದಾರೆ. 
 
ಯುರೋಪ್ ಒಕ್ಕೂಟದಿಂದ ಹೊರಬರುವಂತೆ ಶೇ.51 ರಷ್ಟು ಜನರು ಮತದಾನ ಮಾಡಿದ್ದು, ಯುರೋಪ್ ಒಕ್ಕೂಟದಲ್ಲಿಯೇ ಇರುವಂತೆ ಶೇ.48 ರಷ್ಟು ಜನರು ಮತದಾನ ಮಾಡಿದ್ದಾರೆ.ಆದಾಗ್ಯೂ ಬ್ರಿಟನ್ ಯುರೋಪ್ ಒಕ್ಕೂಟದಿಂದ ಹೊರಹೋಗುತ್ತಿರುವುದು ನೋವಿನ ಸಂಗತಿ ಎಂದು ಯುರೋಪ್ ಮುಖ್ಯಸ್ಥರು ತಿಳಿಸಿದ್ದಾರೆ.
 
ಬ್ರಿಟನ್ ಪ್ರಧಾನಿ ಕ್ಯಾಮರೂನ್ ಆಕ್ಟೋಬರ್ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದಾರೆ. ತಮ್ಮ ಉತ್ತರಾಧಿಕಾರಿ ಯುರೋಪ್ ಒಕ್ಕೂಟದೊಂದಿಗೆ ಸಂಧಾನ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. 
 
ಆದರೆ, ಯುರೋಪ್ ಒಕ್ಕೂಟದ ನಾಯಕರು ಆದಷ್ಟು ಬೇಗ ಬ್ರಿಟನ್, ಒಕ್ಕೂಟದಿಂದ ಹೊರಹೋಗಲು ಅಗತ್ಯವಾದ ಮಾತುಕತೆ ನಡೆಸುವಂತೆ ಕೋರಿದೆ. ಮಾತುಕತೆ ವಿಳಂಬವಾದಲ್ಲಿ ಅನಗತ್ಯವಾಗಿ ಅನಿಶ್ಚತತೆ ಎದುರಾಗಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ