ದಾವೂದ್ ಇಬ್ರಾಹಿಂಗೆ ಹೃದಯಾಘಾತ! ಭೂಗತ ಪಾತಕಿ ಜೀವಕ್ಕೆ ಕುತ್ತು?
ಶನಿವಾರ, 29 ಏಪ್ರಿಲ್ 2017 (07:29 IST)
ಕರಾಚಿ: ಇಷ್ಟು ದಿನಗಳಿಂದ ಭಾರತಕ್ಕೆ ತಲೆನೋವಾಗಿದ್ದ ಭೂಗತ ಲೋಕದ ಪಾತಕಿ ದಾವುದ್ ಇಬ್ರಾಹಿಂಗೆ ತೀವ್ರ ಹೃದಯಾಘಾತವಾಗಿದೆ ಮತ್ತು ಆತ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಖಾಸಗಿ ಚಾನೆಲ್ ಒಂದು ವರದಿ ಮಾಡಿದೆ.
ಶುಕ್ರವಾರ ತೀವ್ರ ಹೃದಯಾಘಾತಕ್ಕೊಳಗಾದ ದಾವೂದ್ ನನ್ನು ಕರಾಚಿಯ ಆಸ್ಪತ್ರೆಯೊಂದಕ್ಕೆ ಸೇರಿಸಲಾಗಿದೆ ಎಂದು ಕೆಲವು ಮೂಲಗಳು ಸುದ್ದಿ ವಾಹಿನಿಗೆ ಹೇಳಿತ್ತು. ಆದರೆ ದಾವೂದ್ ನ ಸಮೀಪವರ್ತಿ ಛೋಟಾ ಶಕೀಲ್ ಇದನ್ನು ತಳ್ಳಿ ಹಾಕಿದ್ದಾನೆ.
ದಾವೂದ್ ಸಂಪೂರ್ಣ ಆರೋಗ್ಯವಾಗಿದ್ದು, ಹೃದಯಾಘಾತವಾಗಿಲ್ಲ ಎಂದು ಶಕೀಲ್ ಸ್ಪಷ್ಟಪಡಿಸಿರುವುದಾಗಿ ವರದಿಯಲ್ಲಿ ಹೇಳಲಾಗಿದೆ. ಕಳೆದ ಬಾರಿಗೆ ಏಪ್ರಿಲ್ 19 ರಂದು ಕರಾಚಿಯಲ್ಲಿ ದಾವೂದ್ ತನ್ನ ಅಳಿಯ ಏರ್ಪಡಿಸಿದ್ದ ಔತಣಕೂಟದಲ್ಲಿ ಪಾಲ್ಗೊಂಡಿದ್ದ ಎನ್ನಲಾಗಿದೆ
ಏನೇ ಇದ್ದರೂ, ತನ್ನ ಪ್ರತಿಷ್ಠೆ ಉಳಿಸಿಕೊಳ್ಳಲು ಪಾಕಿಸ್ತಾನ ದಾವೂದ್ ನ ಆರೋಗ್ಯ ಸ್ಥಿತಿಗತಿಯನ್ನು ಮುಚ್ಚಿಡಬಹುದು. ಯಾಕೆಂದರೆ ಇದುವರೆಗೆ ಮೋಸ್ಟ್ ವಾಂಟೆಡ್ ಕ್ರಿಮಿನಲ್ ತನ್ನ ದೇಶದಲ್ಲಿಲ್ಲ ಎಂದೇ ಹೇಳುತ್ತಿದ್ದ ಪಾಕ್ ಗೆ ಈಗ ದಾವೂದ್ ತನ್ನ ದೇಶದ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ವಿಶ್ವಕ್ಕೆ ಸಾರಿದರೆ ಎಲ್ಲರ ಮುಂದೆ ಮಾನ ಹರಾಜಾಗುವುದು ಖಂಡಿತಾ ಎಂದು ಗೊತ್ತಿದೆ. ಅದಕ್ಕಾಗಿ ದಾವೂದ್ ವಿಷಯ ಗುಪ್ತವಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ